ಮಕ್ಕಳ ಪ್ರತಿಭೆ ಗುರುತಿಸಲು ಪ್ರತಿಭಾ ಪುರಸ್ಕಾರ ಸಹಕಾರಿ

8KMD-1
ಭಾರತೀನಗರದ ಕ್ರೆಂಬಿಡ್ಜ್ ಶಾಲಾ ಆವರಣದಲ್ಲಿ ಭಾರತೀನಗರ ಗ್ರಾ.ಪಂ ವ್ಯಾಪ್ತಿಯ ವಿವಿಧ ಶಾಲಾ ಮಕ್ಕಳಿಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ, ಸಮಾಜ ಸೇವಕ ಕದಲೂರು ಉದಯ್ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.
Published on

ಕೆ.ಎಂ.ದೊಡ್ಡಿ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ, ಸಮಾಜ ಸೇವಕ ಕದಲೂರು ಉದಯ್ ತಿಳಿಸಿದರು.

ಇಲ್ಲಿನ ಕೇಂಬ್ರಿಡ್ಜ್ ಶಾಲಾ ಆವರಣದಲ್ಲಿ ಭಾರತೀನಗರ ಗ್ರಾ.ಪಂ ವ್ಯಾಪ್ತಿಯ ವಿವಿಧ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತಾನಾಡಿದ ಅವರು, ಪ್ರತಿಭಾವಂತ ಬೆಳವಣಿಗೆ ಎನ್ನುವುದು ನಿಧಾನವಾದರೂ ನಿರಂತರ. ಅಂತಹ ಪ್ರತಿಭೆಗಳನ್ನು ಮೊಳಕೆಯಲೇ ಗುರುತಿಸಿ ಪ್ರಶಂಶಿಸುವ ಮೂಲಕ ಹೆಮ್ಮರವಾಗುವಂತೆ ಪ್ರೋತ್ಸಾಹಿಸಬೇಕು ಎಂದರು.

ಮಕ್ಕಳಿಗೆ ಓದಿನ ಜತೆಗೆ ಸೇವಾ ಮನೋಭಾವನೆ ಬೆಳೆಸಬೇಕು. ಹಾಗಾದರೆ ಮಾತ್ರ ಅವರು ಸಮಾಜಕ್ಕೆ ಮಾದರಿಯಾಗುತ್ತಾರೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಮೊಳಕೆಯಲ್ಲೇ ಗುರುತಿಸಿ ಶಿಕ್ಷಕರು ಪ್ರೋತ್ಸಾಹಿಸಬೇಕು ಎಂದರು.

ಮಕ್ಕಳಿಗೆ ಒತ್ತಾಯದಿಂದ ಏನನ್ನೂ ಕಲಿಸಬೇಡಿ, ಆಟವಾಡುತ್ತ ಕಲಿಯಲು ಬಿಡಿ. ಮಕ್ಕಳನ್ನು ಬರಿ ಪಠ್ಯದ ದಾಸರನ್ನಾಗಿ ಮಾಡದೆ, ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಗಳಲ್ಲೂ ಭಾಗವಹಿಸಲು ಅವಕಾಶ ನೀಡಿ ಎಂದು ಪಾಲಕರಿಗೆ ಕಿವಿಮಾತು ಹೇಳಿದರು.

ಗ್ರಾ.ಪಂ ಅಧ್ಯಕ್ಷ ವಕ್ರತುಂಡ ವೆಂಕಟೇಶ್ ಮಾತನಾಡಿ, ಸಮಾಜ ಸೇವಕ ಕದಲೂರು ಉದಯ್ ಅವರು ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಕ್ಷೇತ್ರದಲ್ಲಿ ಉತ್ತಮ ಕಾರ್ಯಗಳನ್ನು ರೂಪಿಸುತ್ತಿದ್ದು, ಅವರ ಸಾಮಾಜಿಕ ಚಿಂತನೆ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.

ಗ್ರಾ.ಪಂ. ಸದಸ್ಯರಾದ ಕೆ.ಟಿ.ಶ್ರೀನಿವಾಸ್, ಶ್ರೀನಿವಾಸ್ ಕುಳ್ಳಪ್ಪ, ಸೌಮ್ಯಾ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಬ್ರಹ್ಮಾನಂದ, ಶಂಕರ್ ಶಾಲಾ ಶಿಕ್ಷಕಿಯರಾದ ಸ್ಮೀತಾ, ಅಶ್ವಿನಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net