ಮಕ್ಕಳ ಪ್ರತಿಭೆ ಅನಾವರಣಕ್ಕೆ ಕಾರಂಜಿ ಸ್ಫೂರ್ತಿ

02
Published on

ಕೊಡೇಕಲ್: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಕಲೋತ್ಸವ ಉತ್ತಮ ವೇದಿಕೆಯಾಗಿದೆ ಎಂದು ಪಿಎಲ್‌ಡಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಧರೆಪ್ಪ ಮೇಟಿ ಹೇಳಿದರು.

ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಸಮೂಹ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡ ಕೊಡೇಕಲ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಮಾತನಾಡಿದ ಅವರು, ಮಕ್ಕಳಲ್ಲಿ ಕ್ರಿಯಾಶೀಲ, ಸೃಜನಶೀಲ ಗುಣ ಬೆಳೆಸುವಲ್ಲಿ ಎಲ್ಲ ಶಿಕ್ಷಕ ಸಿಬ್ಬಂದಿ ಮತ್ತು ಪಾಲಕರ ಜವಾಬ್ದಾರಿಯಾಗಿದೆ ಎಂದರು.

ಸಿಆರ್‌ಸಿ ಮಹಾಂತೇಶ ರೂಪನ್ನವರ ಮಾತನಾಡಿ, ಮಕ್ಕಳ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವ ಜತೆಗೆ ಅವರಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲು ಅನುಕೂಲವಾಗಲಿದೆ ಎಂದರು.

ಎಸ್‌ಡಿಎAಸಿ ಅಧ್ಯಕ್ಷ ರಾಮಲಿಂಗಪ್ಪ ಗುಳಬಾಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಗುರು ಶರಣಗೌಡ ಪಾಟೀಲ್, ಬಿಆರ್‌ಪಿ ಓಂಪ್ರಕಾಶ, ಬಸನಗೌಡ ವಠಾರ, ಶರಣಪ್ಪ ಹೂಗಾರ, ಭೀಮನಗೌಡ ಕಕ್ಕೇರಿ, ಹಣಮಂತ್ರಾಯ ಮಡ್ಡಿ ,ಬಾಲಪ್ಪ ಉಪ್ಪಲದಿನ್ನಿ, ಬಸನಗೌಡ ಪೊಲೀಸ್ ಪಾಟೀಲ್, ಬಸವರಾಜ ಕರೇಕಲ್, ಆನಂದ, ಬೀರಲಿಂಗಪ್ಪ, ರಮೇಶ ವನಹಳ್ಳಿ ಇದ್ದರು. ಮಲ್ಲಿಕಾರ್ಜುನ ಕಂಬಾರ ಸ್ವಾಗತಿಸಿ, ವಂದಿಸಿದರು. ಎಸ್.ಎಸ್.ಮಾರನಾಳ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net