ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ

01 Hg Photo
ಬಿಕ್ಕೋಡು ಹೋಬಳಿಯ ಪಡುವಳಲು ಸರ್ಕಾರಿ ಶಾಲೆಯಲ್ಲಿ ಆಯೊಜಿಸಿದ್ದ ಹುಲುಗುಂಡಿ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಕೆ.ಎಂ.ಗೋಪಾಲ್, ಆರ್.ಮಂಜುನಾಥ್, ಮಲ್ಲಿಕಾರ್ಜುನ ಇತರರಿದ್ದರು.
Published on

ಹಗರೆ: ಮಕ್ಕಳಲ್ಲಿ ವಿಭಿನ್ನ ಸಾಮರ್ಥ್ಯ ಇದ್ದು, ಅದನ್ನು ಗುರುತಿಸುವ ಉದ್ದೇಶದಿಂದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಾಲೂಕು ಶಿಕ್ಷಣ ಸಂಯೋಜಕ ಕೆ.ಎಂ.ಗೋಪಾಲ್ ತಿಳಿಸಿದರು.

ಬಿಕ್ಕೋಡು ಹೋಬಳಿಯ ಪಡುವಳಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹುಲುಗುಂಡಿ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಗಳಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು ನಡೆಯುತ್ತಿದ್ದು, ಪ್ರತಿಭೆ ಅನಾವರಣವಾಗಬೇಕು ಎಂಬುದು ಇಲಾಖೆಯ ಮುಖ್ಯ ಉದ್ದೇಶವಾಗಿದೆ. ಎಲ್ಲ ಸ್ಪರ್ಧೆಯಲ್ಲೂ ವಿಧ್ಯಾರ್ಥಿಗಳು ಭಾಗವಹಿಸಿಬೇಕು ಎಂದು ಕಿವಿಮಾತು ಹೇಳಿದರು.

ರಾಜ್ಯ ನೌಕರರ ಸಂಘದ ತಾಲೂಕು ಅಧ್ಯಕ್ಷ ಆರ್.ಮಂಜುನಾಥ್ ಮಾತನಾಡಿ, ಸೂಲೇ ಗೆಲುವಿನ ಮೆಟ್ಟಿಲು ಎಂಬುದನ್ನು ಮಕ್ಕಳು ಮನದಲ್ಲಿಟ್ಟುಕೊಂಡು ಗೆಲ್ಲಲೇಬೇಕೆಂಬ ಹುಮ್ಮಸ್ಸಿನಿಂದ ಪ್ರಯತ್ನಪಡಬೇಕು. ಪ್ರತಿ ಕ್ಲಷ್ಟರ್ ಮಟ್ಟದಲ್ಲೂ ಗ್ರಾಮಸ್ಥರ ಸಹಕಾರದಿಂದ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಎಸ್.ಇ.ಮಲ್ಲಿಕಾರ್ಜುನ, ಬಿ.ಆರ್.ಪಿ ಜಯಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ರಾಘವೇಂದ್ರ, ಎಸ್‌ಡಿಎಂಸಿ ಅಧ್ಯಕ್ಷ ಚಂದನ್, ಗ್ರಾಪಂ ಅಧ್ಯಕ್ಷೆ ದ್ರಾಕ್ಷಾಯಿಣಿ, ಸದಸ್ಯೆ ವೀಣಾ, ಉದಯ್ ಕುಮಾರ್, ರೂಪೇಶ್, ಪಡುವಳಲು ಶಾಲೆಯ ಮುಖ್ಯ ಶಿಕ್ಷಕ ಸೋಮಶೇಖರ್, ಶಿಕ್ಷಕರಾದ ಪ್ರಕಾಶ್, ಮಮತಾ, ಗಣೇಶ್, ಕುಮಾರ್, ತೀರ್ಥಮಣಿ, ಹೇಮಾ, ಲಾಸ್ಯಾ, ಗ್ರಾಮಸ್ಥರಾದ ಹರೀಶ್, ದೇವುಕುಮಾರ, ತಾರೇಶ್, ಸಂದೀಪ್, ರಘು, ದಿನೇಶ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net