ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ

ydg4
ಯಾದಗಿರಿ ತಾಲೂಕಿನ ಮಲಕಪನಹಳ್ಳಿಯಲ್ಲಿ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಬಸವರಾಜ ಮನಗನಾಳ ಉದ್ಘಾಟಿಸಿದರು. ಶಂಕ್ರಪ್ಪ, ಶಿವಾನಂದ, ಬಂಗಾರಪ್ಪ, ವಿಠ್ಠಲ್, ಮಲ್ಲಮ್ಮ, ಚನ್ನಬಸಪ್ಪ ಜೋಗಿ ಇತರರಿದ್ದರು.
Published on

ಯಾದಗಿರಿ: ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ತರಲು ಪ್ರತಿಭಾ ಕಾರಂಜಿ ಕಾರ್ಯಕ್ರಮವು ಉತ್ತಮ ವೇದಿಕೆಯಾಗಿದೆ ಎಂದು ಶಿP್ಷÀಣ ಸಂಯೋಜಕ ಬಸವರಾಜ ಮನಗನಾಳ ಹೇಳಿದರು.

ತಾಲೂಕಿನ ಯರಗೋಳ ಸಮೀಪದ ಮಲಕಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಯರಗೋಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲಾ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆಚ್ಚು ಮಕ್ಕಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.

ಪ್ರಭಾರಿ ಕ್ಷೇತ್ರ ಸಮನ್ವಯ ಅಧಿಕಾರಿ ಶರಣಬಸಪ್ಪ ಪಾಕರೆಡ್ಡಿ ಮಾತನಾಡಿದರು. ವಿದ್ಯಾರ್ಥಿಗಳಿಗಾಗಿ ಕಂಠಪಾಠ , ಅಭಿನಯ ಗೀತೆ, ಪದ್ಮವೇಷ, ಕ್ಲೇ ಮಾಡಲಿಂಗ್, ಚಿತ್ರಕಲೆ, ಜಾನಪದ ನೃತ್ಯ ಸ್ಪರ್ಧೆಗಳು ನಡೆದವು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕ್ಲಸ್ಟರ್ ಮಟ್ಟದಲ್ಲಿ ವಿಜೇತರು ತಾಲೂಕು ಮಟ್ಟಕ್ಕೆ ಆಯ್ಕೆಯಾದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶಂಕ್ರಪ್ಪ, ಶಿವಾನಂದ, ಬಂಗಾರಪ್ಪ, ವಿಠ್ಠಲ ,ಶಾಲಾ ಅಭಿವೃದ್ಧಿ ಅಧ್ಯಕ್ಷೆ ಮಲ್ಲಮ್ಮ ಚನ್ನಬಸಪ್ಪ ಜೋಗಿ, ಸದಸ್ಯ ಮಂಜುನಾಥ, ಗ್ರಾಪಂ ಸದಸ್ಯ ಭೀಮರಾಯ ,ಮಹಾದೇವ, ಶಿP್ಷÀಕರಾದ ಚಂದ್ರಪ್ಪ ಗುಂಜನೂರ, ಮಲ್ಲಿನಾಥ, ಸಣ್ಣಮೀರ, ನಾಗಪ್ಪ ಪ್ರಕಾಶ,ಶ್ರೀನಿವಾಸ, ಗುಂಡಮ್ಮ, ಸಪ್ನಾ, ಕಲ್ಪನಾ, ಶಿವಕಾಂತಮ್ಮ ನಾಗವೇಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net