ಮಕ್ಕಳ ಪಾಲನೆಗೆ ತಾಳ್ಮೆ, ಸಹನೆ ಅಗತ್ಯ

09ydg03
Published on

ಯಾದಗಿರಿ: ಕಿಶೋರಾವಸ್ತೆಯಲ್ಲಿನ ಮಕ್ಕಳು ಪ್ರತಿದಿನ ಒಂದಿಲ್ಲೊಂದು ತಮ್ಮದೆಯಾದ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುತ್ತಾರೆ. ಹೀಗಾಗಿ, ಶಿಶು ಆರೈಕೆದಾರರಲ್ಲಿ ತಾಳ್ಮೆ ಹಾಗೂ ಸಹನೆ ಅಗತ್ಯವಾಗಿದೆ ಎಂದು ತಾಪಂ ಇಒ ಸೋಮಶೇಖರ ಬಿರಾದಾರ ಸಲಹೆ ನೀಡಿದರು.
ಬುಧವಾರ ಶಹಾಪುರದ ತಾಪಂ ಕಚೇರಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗ್ರಾಪಂ ಶಿಶುಪಾಲನ ಕೇಂದ್ರಗಳ ಶಿಶು ಆರೈಕೆದಾರರಿಗೆ ಆಯೋಜಿಸಿದ್ದ ನಾಲ್ಕು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿನ ಮಹಿಳಾ ಕೂಲಿ ಕಾಮರ್ಿಕರ 6 ವರ್ಷದೊಳಗಿನ ಮಕ್ಕಳ ಆರೋಗ್ಯ, ಅಪೌಷ್ಟಿಕತೆ ಹಾಗೂ ಸುರಕ್ಷತೆಗಾಗಿ ಪಂಚಾಯಿತಿಗಳಲ್ಲಿ ಸರಕಾರ ಸುತ್ತೋಲೆಯಂತೆ ಕೂಸಿನ ಮನೆ ಶಿಶುಪಾಲನ ಕೇಂದ್ರ ಆರಂಭಿಸುತ್ತಿದ್ದು, ಇದರ ಸದುಪಯೋಗ ಪಡೆಯುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಎಂದು ಹೇಳಿದರು.
ಕೂಲಿ ಕಾಮರ್ಿಕರ ಮಕ್ಕಳ ಪಾಲನೆಗೆ ಶಿಶುಪಾಲನ ಕೇಂದ್ರ ಆರಂಭಿಸಿದ್ದು, ಕೆಲಸಕ್ಕೆ ಹೋಗುವ ತಾಯಂದಿರು ತಮ್ಮ ಮಕ್ಕಳನ್ನು ಕೇಂದ್ರದಲ್ಲಿ ಬಿಟ್ಟು ನಿಶ್ಚಿಂತೆಯಿಂದ ತೆರಳಬಹುದಾಗಿದೆ. ಕೇಂದ್ರಕ್ಕೆ ಬರುವ ಮಕ್ಕಳನ್ನು ಸ್ವಂತ ಮಕ್ಕಳಂತೆ ಆರೈಕೆ ಮಾಡುವುದು ಕೇರ್ಟೇಕರ್ ಜವಾಬ್ದಾರಿಯಾಗಿದೆ ಎಂದು ಸೂಚಿಸಿದರು.
ಕೂಸಿನ ಮನೆಯಲ್ಲಿ ಮಕ್ಕಳ ಆರೈಕೆಗೆ ಅಗತ್ಯವಾದ ಮೂಲ ಸೌಲಭ್ಯಗಳಿದ್ದು, ಪ್ರಥಮ ಚಿಕಿತ್ಸಾ, ಆಟಿಕೆ ಸಾಮಾನುಗಳು, ಕಲಿಕಾ ಸಾಮಗ್ರಿಗಳು, ಶುದ್ಧ ಕುಡಿಯುವ ನೀರು, ಪೌಷ್ಟಿಕ ಆಹಾರ ಕ್ರಮ ಸೇರಿ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಲಾಗುತ್ತದೆ ಎಂದರು.

ತಾಲೂಕು ಯೋಜನಾ ರಾಘವೇಂದ್ರ ಕುಲಕಣರ್ಿ, ಸಹಾಯಕ ನಿದರ್ೇಶಕ ಭೀಮರಾಯ ಬಿರಾದಾರ, ಅಜೀತಕುಮಾರ, ಕವಿತಾ ಕುಲಕಣರ್ಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net