

ಕಾಗವಾಡ: ಮಕ್ಕಳಲ್ಲಿಯ ಭಾಷೆ ಬೆಳವಣಿಗೆ, ಸಾಮಾಜಿಕ ಸಂವಹನ, ಕೌಶಲ ಮತ್ತು ನಡವಳಿಕೆಯ ಬದಲಾವಣೆಗಳ ಬಗ್ಗೆ ಪಾಲಕರು ಗಮನ ನೀಡಬೇಕು ಎಂದು ಸಾಂಗಲಿ ಜಿಲ್ಲಾ ಪರಿಷತ್‌ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯನಿರ್ವಹಣಾಽಕಾರಿ ಸುನೀಲ ಯಾದವ ತಿಳಿಸಿದರು.
ಮಹಾರಾಷ್ಟ್ರದ ಮಿರಜ್ ಪಟ್ಟಣದ ನಿರ್ಮಲ ಆಸ್ಪತ್ರೆಯಲ್ಲಿ ಆಟಿಸಂ ಮತ್ತು ಕಲಿಕಾ ನ್ಯೂನತೆ ಶಿಕ್ಷಣ ಕೇಂದ್ರವನ್ನು ಈಚೆಗೆ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಎದುರಾಗುವ ವಿವಿಧ ಸಮಸ್ಯೆಗಳು ಮತ್ತು ಅವುಗಳ ಪರಿಹಾರಗಳ ಬಗ್ಗೆ ಮಾರ್ಗದರ್ಶನ ನೀಡಿದರು.
ಡಾ.ಚಂದ್ರಶೇಖರ ಹಳಿಂಗಳೆ ಮಾತನಾಡಿ, ನಿರ್ಮಲ ಆಸ್ಪತ್ರೆಯಲ್ಲಿ ಆಟಿಸಂ, ಎಡಿಎಚ್‌ಡಿ, ಮಿದುಳು ಬೆಳವಣಿಗೆಗೆ, ಓದುವ ಮತ್ತು ಬರೆಯುವ ಸಮಸ್ಯೆಗಳು (ಡಿಸ್ಲೆಕ್ಸಿಯಾ) ಸೇರಿ ಇತರ ಸಮಸ್ಯೆಗಳಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ಡಾ. ನಿಶಾ ಹಳಿಂಗಳೆ ಮಾತನಾಡಿ, ಮಕ್ಕಳಲ್ಲಿ ಬೆಳೆಯುತ್ತಿರುವ ನ್ಯೂರೋ ಡೆವಲಪ್‌ಮೆಂಟ್ ಮತ್ತು ಕಲಿಕೆಯ ಅಸ್ವಸ್ಥತೆಗಳ ಕುರಿತು ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ಹಾಗೂ ಮಾರ್ಗದರ್ಶನ ನೀಡಲಾಗುತ್ತದೆ ಎಂದು ತಿಳಿಸಿದರು.
ಡಾ. ಮಾಧುರಿ ವಾಂಗಪಾಟಿ ಮಾತನಾಡಿ, ಮಕ್ಕಳಲ್ಲಿನ ಕಲಿಕೆಯ ತೊಂದರೆಗಳು, ನಡವಳಿಕೆಯ ಸಮಸ್ಯೆ ಮತ್ತು ಪರಿಹಾರಗಳ ಬಗ್ಗೆ ಮಾಹಿತಿ ನೀಡಿದರು. ಡಾ.ರಾಜಕಿರಣ ಸಾಳುಂಕೆ, ಸೂರ್ಯಕಾಂತ ಹಳಿಂಗಳೆ, ಪ್ರೀತಿ ಶಿಂಧೆ ಇತರರು ಇದ್ದರು.