ಮಕ್ಕಳ ದೈಹಿಕ,ಮಾನಸಿಕ ವಿಕಸನಕ್ಕೆ ದೇಸಿ ಕ್ರೀಡೆಗಳು ಸಹಕಾರಿ

CTD 15 GALIPATA--01
Published on


ಚಿತ್ರದುರ್ಗ: ನಗರದ ಜ್ಞಾನಭಾರತಿ ವಿದ್ಯಾಮಂದಿರದಿಂದ ಚಂದ್ರವಳ್ಳಿ ಆಟದ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಗಾಳಿಪಟ ಹಬ್ಬದಲ್ಲಿ ವಿದ್ಯಾ ಮಂದಿರದ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ರಂಗು ರಂಗಿನ,ವಿವಿಧ ಮಾದರಿಯ ಗಾಳಿಪಟಗಳ ಹಾರಾಟಕ್ಕೆ ವಾತಾವ ರಣವೂ ಸಹಕರಿಸಿತ್ತು.

ಕಾರ‌್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಗಿರಿಜಾ ಅವರು ಮಾತನಾಡಿ,ಮಕ್ಕಳ ದೈಹಿಕ ಹಾಗೂ ಮಾನಸಿಕ ವಿಕಸನಕ್ಕೆ ಗಾಳಿ ಪಟ ಹಾರಿಸುವಂಥ ದೇಸಿ ಕ್ರೀಡೆಗಳ ಸಹಕಾರಿಯಾಗಿವೆ. ಓದಿನ ಜತೆಗೆ ಇಂಥ ಆಟೋಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಕ್ಕಳ ನ್ನು ಪಾಲಕರು ಪ್ರೋತ್ಸಾಹಿಸಬೇಕು.

ಬಾನೆತ್ತರಕ್ಕೆ ಹಾರುವ ಗಾಳಿಪಟದಂತೆ ವ್ಯಕ್ತಿತ್ವವೂ ಎತ್ತರಕ್ಕೆ ಹೋಗುವಂತಾಗಬೇಕು. ಬದುಕು ನಿಯಂ ತ್ರಣದಲ್ಲಿ ಇರದಿದ್ದರೆ ಸೂತ್ರವಿಲ್ಲದ ಗಾಳಿಪಟದಂತಾಗುತ್ತದೆ,ಉತ್ತಮ ಸಂಸ್ಕಾರ ಉಜ್ವಲ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದರು.

ವಿದ್ಯಾಮಂದಿರದ ಕಾರ‌್ಯದರ್ಶಿ ಡಾ.ಕೆ.ರಾಜೀವಲೋಚನ ಮಾತನಾಡಿ,ಗಾಳಿಪಟ ಹಾರಾಟದಿಂದ ಮನಸ್ಸು ಹಗುರಾಗುತ್ತದೆ. ಕಹಿ ನೆನ ಪುಗಳನ್ನು ಮರೆಸಲು ಈ ಹಬ್ಬ ಸಹಕಾರಿಯಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕಿ ದ್ರಾಕ್ಷಾಯಣಿ ಅವರು ಗಾಳಿಪಟ ಮಕ್ಕಳಲ್ಲಿ ಸೃಜನಶೀಲತೆಯನ್ನು ಪ್ರೋತ್ಸಾಹಿಸುತ್ತದೆ ಎಂದರು. ಪ್ರಾಂಶುಪಾಲ ಪ್ರಜ್ವಲ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net