ಮಕ್ಕಳ ಜತೆಗೆ ಪೋಷಕರು ಹೆಚ್ಚು ಸಮಯ ಬೆರೆಯಲಿ

28_HSN_02
ನಗರದ ತಣ್ಣೀರುಹಳ್ಳದ ವಿಜಯನಗರ ಪತಂಜಲಿ ಯೋಗ ಸಂಘದ ವತಿಯಿಂದ ಭಾನುವಾರ ಗುರುಪೂರ್ಣಿಮೆ ಅಂಗವಾಗಿ ಅಗ್ನಿಹೋತ್ರ ನಡೆಸಲಾಯಿತು. ಈ ವೇಳೆ ಹರಿಹರಪುರ ಶ್ರೀಧರ್, ಪಾರಸ್ಮಲ್, ಎಸ್.ಡಿ. ಲೋಕನಾಥ್, ಸುರೇಶ ಪ್ರಜಾಪತಿ, ಶೇಷಾಪ್ಪಾಜಿ, ನಾಗೇಶ್, ಶೇಷಾಶೆಟ್ಟಿ, ಶಿವನಂಜೇಗೌಡ, ಶಾಂತಣ್ಣ, ಸಚಿನ್, ಸುರೇಶ್, ಲತಾ, ಯಶೋಧಾ ಇತರರು ಇದ್ದರು.
Published on

ಹಾಸನ: ಮನೆಯಲ್ಲಿ ತಂದೆ-ತಾಯಂದಿರು ಮೊಬೈಲ್ ಹಾಗೂ ಟಿವಿ ನೋಡುವುದರಲ್ಲೇ ಹೆಚ್ಚು ಸಮಯ ಕಳೆಯುವ ಬದಲು ಮಕ್ಕಳ ಜತೆ ಹೆಚ್ಚು ಸಮಯ ಕಳೆದು ಸಂಸ್ಕಾರ ಕಲಿಸಿದರೆ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಬಹುದು ಎಂದು ವೇದ ಭಾರತೀಯ ಹರಿಹರಪುರ ಶ್ರೀಧರ್ ತಿಳಿಸಿದರು.

ನಗರದ ತಣ್ಣೀರುಹಳ್ಳದ ವಿಜಯನಗರ ಪತಂಜಲಿ ಯೋಗ ಸಂಘದ ವತಿಯಿಂದ ಭಾನುವಾರ ಗುರುಪೂರ್ಣಿಮೆ ಅಂಗವಾಗಿ ಅಗ್ನಿಹೋತ್ರ ನಡೆಸಿಕೊಟ್ಟು ಮಾತನಾಡಿದ ಅವರು, ಮನೆಯಲ್ಲಿ ತಂದೆ-ತಾಯಿ, ಮಕ್ಕಳು ಹಾಗೂ ಕುಟುಂಬದವರೊಟ್ಟಿಗೆ ಹೆಚ್ಚು ಸಮಯ ಕಳೆಯಬೇಕು. ತಾಯಂದಿರು ಅಡುಗೆ ಮಾಡುವಾಗ ಮೊಬೈಲ್ ಬಳಕೆ ಮಾಡದಂತೆ ತಿಳಿ ಹೇಳಿದರು.

ಕಾರ್ಯಕ್ರಮದಲ್ಲಿ ಸಂಘ ಪರಿವಾರದ ನಗರ ಸಂಚಾಲಕರಾದ ಪಾರಸ್ಮಲ್ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ನೀಡುವಲ್ಲಿ ತಂದೆ- ತಾಯಿ, ಅಜ್ಜ- ಅಜ್ಜಿಯ ಪಾತ್ರ ಮುಖ್ಯವಾದುದು. ಯಾವುದೇ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯಾಗಿ ಮಾಡಬೇಕು ಎಂಬ ಚಿಂತನೆ ಪ್ರತಿಯೊಂದು ಕುಟುಂಬದಲ್ಲಿ ಬರಬೇಕು. ಪೋಷಕರು ಮಕ್ಕಳೊಂದಿಗೆ ಒಟ್ಟಿಗೆ ಕೂತು ಊಟ ಮಾಡಬೇಕು. ದೇವಸ್ಥಾನಗಳಿಗೆ, ಬಂಧುಗಳ ಮನೆಗೆ ಮಕ್ಕಳನ್ನು ಕರೆದುಕೊಂಡು ಹೋದಾಗ ಸಂಬಂಧ ಗಟ್ಟಿಯಾಗಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವಿಜಯನಗರ ಪತಂಜಲಿ ಯೋಗ ಸಂಸ್ಥೆಯ ಅಧ್ಯಕ್ಷ ಎಸ್.ಡಿ. ಲೋಕನಾಥ್ ಹಾಗೂ ಶ್ರೀಧರ್ ಹರಿಹರಪುರ, ಜಿಲ್ಲಾ ಪ್ರಭಾರಿಗಳಾದ ಸುರೇಶ ಪ್ರಜಾಪತಿ, ಶೇಷಾಪ್ಪಾಜಿ, ನಾಗೇಶ್, ಪತಂಜಲಿ ಯೋಗ ಕೇಂದ್ರದ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಕುಮಾರಿ ಸಿಂಚನಾ ಭರತನಾಟ್ಯ ಮುಖೇನ ಗುರುನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶೇಷಾಶೆಟ್ಟಿ, ಶಿವನಂಜೇಗೌಡ, ಶಾಂತಣ್ಣ, ಸಚಿನ್, ಸುರೇಶ್, ಲತಾ, ಯಶೋಧಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net