

ಚಿತ್ರದುರ್ಗ: ಶಾಲಾ ಮಕ್ಕಳ ಗೈರು ಹಾಜರಿ,ಜಿಲ್ಲೆಯ ಶೈಕ್ಷಣಿಕ ಫಲಿತಾಂಶದಲ್ಲಿ ಕುಸಿತ,ಬಾಲ ಕಾರ್ಮಿಕ,ಬಾಲ್ಯವಿವಾಹ,ಬಾಲ ಗರ್ಭಿಣಿ, ತಾಯಿ ಹಾಗೂ ಶಿ ಶು ಮರಣ ದರದ ಹೆಚ್ಚಳದೊಂದಿಗೆ ನೇರ ಸಂಬಂಧ ಹೊಂದಿದೆ. ಆದ್ದರಿಂದ ಮಕ್ಕಳ ಗೈರು ಹಾಜರಿ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಎಡಿಸಿ ಬಿ.ಟಿ.ಕುಮಾರಸ್ವಾಮಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಡಿಸಿ ಕಚೇರಿಯಲ್ಲಿ ಸೋಮವಾರ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನ ಆಚರಣೆ ಕುರಿತಂತೆ ಜಿಲ್ಲಾಮಟ್ಟದ ಕಾರ‌್ಯಕಾರಿ ಸಮಿತಿ ಮತ್ತು ಜಿಲ್ಲಾಮಟ್ಟದ ಟಾಸ್ಕ್‌ಪೋರ್ಸ್ ಸಭೆಯಲ್ಲಿ ಮಾತನಾಡಿ,
ಶಾಲೆಗೆ ಮಕ್ಕಳ ಹೆಚ್ಚು ದಿನಗಳ ಗೈರು ಹಾಜರಿಯನ್ನು ಗಂಭಿರವಾಗಿ ಪರಿಗಣಿಸಬೇಕು. ಗೈರಾದ ಗಂಡು ಮಕ್ಕಳು ಬಾಲ ಕಾರ್ಮಿಕರಾಗಿರುವ, ಹೆಣ್ಣು ಮಕ್ಕಳು ಬಾಲ್ಯವಿವಾಹಕ್ಕೆ ಒಳಗಾಗುವ ಸಂಭವವಿರುತ್ತದೆ. ಗೈರು ಹಾಜರಿ ಕಂಡು ಬಂದರೆ ಶಿಕ್ಷಕರು ತಕ್ಷಣ ಮಕ್ಕಳ ಮನೆಗಳಿಗೆ ಭೇಟಿ ನೀ ಡಿ ಪಾಲಕರೊಂದಿಗೆ ಸಮಾಲೋಚನೆ ನಡೆಸ ಬೇಕೆಂದರು.
ಬಾಲ ಕಾರ್ಮಿಕರನ್ನು ಗುರುತಿಸಿ,ಸಮಾಜದ ಮುಖ್ಯವಾಹಿನಿಗೆ ತರಲು ಕಾರ್ಮಿಕ ನಿರೀಕ್ಷಕರು ಮುತುವರ್ಜಿ ವಹಿಸಬೇಕು. ಶಾಲೆಯಿಂದ ಹೊ ರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಜತೆಗೆ ವಸತಿ ಶಾಲೆಗಳಿಗೆ ದಾಖಲಿಸಲು ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು.ಮಂಡಕ್ಕಿ ಭ ಟ್ಟಿ,ಇಟ್ಟಿಗೆ ಭಟ್ಟಿ,ಗ್ಯಾರೇಜ್‌ಗಳ ಕಾರ್ಮಿಕ ನಿರೀಕ್ಷಕರು ನಿಯಮಿತವಾಗಿ ದಾಳಿ ನಡೆಸ ಬೇಕು. ಹೊಸದುರ್ಗ ತಾಲೂಕಿನ ಇಟ್ಟಿಗೆ ಬಟ್ಟಿಗಳಲ್ಲಿ ಒ ರಿಸ್ಸಾ,ಬಿಹಾರ,ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಕುಟುಂಬಗಳ ಮಕ್ಕಳ ಶಿಕ್ಷಣಕ್ಕಾಗಿ ಹಿಂದಿ ಶಿಕ್ಷಕರನ್ನು ನೇ ಮಿಸಿ,ತಾತ್ಕಾಲಿಕ ಟೆಂಟ್ ಶಾಲೆಗಳನ್ನು ತೆರೆಯುವಂತೆ ಸೂಚಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲಬಾಲಚಂದ್ರ ಬಗಟಿ ಮಾತನಾಡಿ,2025ರ ಜೂನ್ 12ರಂದು ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನ ಆ ಚರಣೆ ಅಂಗವಾಗಿ ಅಂದು ಬೆಳಗ್ಗೆ 10ಕ್ಕೆ ನಗರದ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆಯಿಂದ ಒನಕೆ ಓಬವ್ವ ವೃತ್ತದವರೆಗೂ ಜಾಗೃತಿ ಜಾಥಾ ಹಾಗೂ ಜಿಪಂದಲ್ಲಿ ವೇದಿಕೆ ಕಾರ‌್ಯಕ್ರಮ ಏರ್ಪಡಿಸಲಾಗಿದೆ, ತಾಲೂಕು ಕೇಂದ್ರಗಳಲ್ಲೂ ಈ ಕಾರ‌್ಯಕ್ರಮವನ್ನು ಆಚರಿಸಬೇಕೆಂದರು. ಜೂನ್ 13ರಿಂದ 30 ರವರೆಗೆ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕರ ಪತ್ತೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಬಾಲಕಾರ್ಮಿಕ ಯೋಜನಾ ಸೊ ಸೈಟಿ ಯೋಜನಾ ನಿರ್ದೇಶಕ ಪಿ.ಸತೀಶ್‌ಕುಮಾರ್ ತಿಳಿಸಿದರು. ಎಎಸ್‌ಪಿ ಎಸ್.ಜೆ.ಕುಮಾಸ್ವಾಮಿ,ಡಿಡಿಪಿಐ ಎಂ.ಆರ್.ಮಂಜುನಾಥ,ಡಿಎ ಚ್‌ಒ ಡಾ.ಜಿ.ಪಿ.ರೇಣುಪ್ರಸಾದ್,ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆ ಉಪನಿರ್ದೇಶಕ ಭಾರತಿ ಆರ್.ಬಣಕಾರ್,ಜಿಲ್ಲಾ ಮಕ್ಕಳ ರಕ್ಷ ಣಾಧಿಕಾರಿ ಸವಿತಾ ಇತರರು ಇದ್ದರು.