

ಬೆಟ್ಟದಪುರ: ಗ್ರಾಮೀಣ ಮಕ್ಕಳ ಪ್ರತಿಭೆಯನ್ನು ಹೊರತಂದು ಕ್ರಿಯಾಶೀಲತೆಯನ್ನು ಜಾಗೃತಿಗೊಳಿಸಲು ಕಲಿಕಾ ಹಬ್ಬ ಸಹಕಾರಿ ಎಂದು ಉಪಪ್ರಾಂಶುಪಾಲ ಬಿ.ಎಸ್. ರೇವಣ್ಣ ತಿಳಿಸಿದರು.
ಬೆಟ್ಟದಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಮನಸ್ಸು ಕಲಿಕೆಯಿಂದ ವಿಮುಖವಾಗಬಾರದು ಎಂಬ ಉದ್ದೇಶದಿಂದ ಈ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಎಂದು ಆಚರಿಸಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಕಲಿಕಾ ಚೈತನ್ಯ ತುಂಬಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಎಸ್‌ಡಿಎಂಸಿ ಅಧ್ಯಕ್ಷೆ ಮೀನಾಕುಮಾರಿ, ಉಪಾಧ್ಯಕ್ಷೆ ಸೌಮ್ಯಾ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣಗೌಡ, ಹಲಗನಹಳ್ಳಿ ಶಾಲೆ ಮುಖ್ಯಶಿಕ್ಷಕ ನಿತ್ಯಾನಂದ, ಶಿಕ್ಷಕರಾದ ಲಿಂಗರಾಜು, ಕೆಂಪರಾಜು, ಜಗದೀಶ್, ಜ್ಯೋತಿ, ಅಭಿಗೌಡ, ವಿಜಯ್‌ಕುಮಾರಿ, ರೂಪಕುಮಾರಿ, ಸಿಆರ್‌ಪಿ ಚಂದ್ರಶೇಖರ್, ಮುಖಂಡರಾದ ರಾಜೇಂದ್ರ, ಚೆಲುವನಾಯಕ ಇತರರು ಇದ್ದರು.