ಮಕ್ಕಳ ಕೌಶಲ ಅನಾವರಣಗೊಳಿಸಿದ ಪ್ರದರ್ಶನ

0910Klb04
Published on

ಕಲಬುರಗಿ: ನಗರದ ಅಪ್ಪ ಪಬ್ಲಿಕ್ ಶಾಲೆಯಲ್ಲಿ ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಆಧರಿಸಿ ರೂಪಿಸಿದ ವಸ್ತುಗಳ ಪ್ರದರ್ಶನ ನಡೆಯಿತು. ನರ್ಸರಿಯಿಂದ ೧೨ನೇ ತರಗತಿವರೆಗಿನ ವಿದ್ಯಾರ್ಥಿಗಳು ತಮ್ಮ ಕೌಶಲಕ್ಕೆ ಅನುಗುಣ ಮಾದರಿಗಳನ್ನು ಪ್ರದರ್ಶಿಸಿ ಭೇಷ್ ಎನಿಸಿಕೊಂಡರು.

ಶರಣಬಸವೇಶ್ವರ ಸಂಸ್ಥಾನದ ೯ನೇ ಪೀಠಾಧಿಪತಿ ಚಿ.ದೊಡ್ಡಪ್ಪ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮತ್ತು ಜಿಲ್ಲಾ ವಿಜ್ಱನ ಕೇಂದ್ರದ ಅಧಿಕಾರಿ ಸುನೀಲï ಉದ್ಘಾಟಿಸಿದರು.
ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಕಲಿಕೆ ಪ್ರದರ್ಶನಗಳು ಗಮನ ಸೆಳೆದವು. ಅಕ್ಷರ ಜ್ನಾನ ಮತ್ತು ವ್ಯಾಕರಣ ಪ್ರಾತ್ಯಕ್ಷಿಕೆಗಳ ಮೂಲಕ ಸರಳವಾಗಿ ಹೇಗೆ ಪರಿಣಾಮಕಾರಿಯಾಗಿ ಕಲಿಯಬಹುದು ಎಂಬುದನ್ನು ವಿದ್ಯಾರ್ಥಿಗಳು ತಿಳಿಸಿಕೊಟ್ಟರು. ಸಂಸತ್ತು, ವಿಧಾನಸೌಧ ಮಾದರಿಗಳನ್ನು ರೂಪಿಸಿದ್ದರು.

೧ನೇ ತರಗತಿಯ ಚಿ.ದೊಡ್ಡಪ್ಪ ಅಪ್ಪ ಸಾರಿಗೆಯಲ್ಲಿ ಆದ ಪ್ರಗತಿ ಪ್ರದರ್ಶಿಸಿದರು. ಗಾಲಿಯ ಆವಿಷ್ಕಾರದ ನಂತರ ಹೇಗೆ ಸಾರಿಗೆ ವ್ಯವಸ್ಥೆ ಚಕ್ಕಡಿಯಿಂದ ಬಸ್ಸು, ಬಸ್ಸಿನಿಂದ ವಿಮಾನ, ಚಂದ್ರಯಾನ ಮತ್ತು ಆದಿತ್ಯ ಯಲರವರಗೆ ಬಂದ ಬೆಳೆವಣಿಗೆಗಳ ಬಗ್ಗೆ ವಸ್ತುಗಳನ್ನು ಪ್ರದರ್ಶಿಸಿದರು. ೭ನೇ ತರಗತಿಯ ಶಿವಾನಿ ಎಸ್.ಅಪ್ಪ ಸಂಗಡಿಗರೊಂದಿಗೆ ಮುಸುಕು ತುಂಬಿದಾಗ ಅಪಘಾತಗಳನ್ನು ಹೇಗೆ ತಡಯಬಹುದು ಎಂಬ ಪ್ರದರ್ಶನ ಹಾಗೂ ಭವಾನಿ ಎಸ್.ಅಪ್ಪ ತಮ್ಮ ತಂಡದವರೊಂದಿಗೆ ಕಸದಿಂದ ಹೇಗೆ ವಿದ್ಯುತ್ ಉತ್ಪಾದಿಸಬಹುದು? ೫ನೇ ವಿದ್ಯಾರ್ಥಿನಿ ಮಹೇಶ್ವರಿ ಎಸ್.ಅಪ್ಪ ನೈಸರ್ಗಿಕವಾಗಿ ನೀರು ಹೇಗೆ ಶುದ್ದೀಕರಣಕೊಳ್ಳುತ್ತದೆ ಎಂಬ ಪ್ರಾಯೋಗಿಕ ಮಾದರಿ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಸುನೀಲ್ ಹಾಗೂ ಬಸವರಾಜ ದೇಶಮುಖ ಪ್ರದರ್ಶನ ನೋಡಿ ಹೊಸ ಪ್ರಯೋಗ ಮತ್ತು ಆವಿಷ್ಕಾರಗಳಿಗೆ ಸಾಕಷ್ಟು ಅವಕಾಶಗಳಿವೆ. ಮಕ್ಕಳು ಹೊಸ ವಿಷಯಗಳ ಕುರಿತು ಗಮನಹರಿಸಲು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net