

ಹುಮನಾಬಾದ್: ೧೮ ವಯಸ್ಸಾದ ನಂತರ ವಾಹನ ಚಾಲನೆ ಮಾಡಲು ಕಾನೂನು ಅವಕಾಶ ನೀಡಿದೆ. ಪಾಲಕರು ಮಕ್ಕಳ ಕೈಗೆ ವಾಹನ ನೀಡುವುದು ಕಾನೂನಿನ ವಿರುದ್ಧ ಎಂದು ಸಂಚಾರ ಠಾಣೆ ಪಿಎಸ್‌ಐ ಸುನೀತಾ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನಲ್ಲಿ ಸಂಚಾರಿ ಪೊಲೀಸ್ ಹಾಗೂ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಮಕ್ಕಳಲ್ಲಿ ಸಂಚಾರಿ ನಿಯಮ ಮತ್ತು ಪೋಕ್ಸೊ ಕಾಯ್ದೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಲೈಸೆನ್ಸ್, ಹೆಲ್ಮೆಟ್ ಧರಿಸಬೇಕು. ನಿಯಮ ಪಾಲಿಸಬೇಕು ಎಂದರು. ಪ್ರಾಚಾರ್ಯ ಪಿ.ಆರ್.ಹುಗ್ಗಿ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಒಳ್ಳೆ ಸಂಸ್ಕಾರ, ಓದಿನತ್ತ ಗಮನ ಕೊಟ್ಟು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಉಪನ್ಯಾಸಕ ತಿಪ್ಪಣ್ಣ ಕೆ, ಗೋರಖನಾಥ, ಸಿದ್ದರಾಜ, ಶ್ರೀಕಾಂತ, ಬಸವರಾಜ ಇತರರಿದ್ದರು. ಎನ್‌ಎಸ್‌ಎಸ್ ಅಧಿಕಾರಿ ಡಾ.ತುಳಜಾರಾಮ ಸ್ವಾಗತಿಸಿದರು.