ಮಕ್ಕಳ ಕಲಿಕೆಗೆ ಸೇತುವೆಯಾಗಿ

02
Published on

ಕೊಡೇಕಲ್ : ಶಿಕ್ಷಕರು ಕಲಿಸುವ ಮತ್ತು ಮಕ್ಕಳು ಕಲಿಯುವ ವಿಧಾನದಲ್ಲಿ ಹೊಂದಾಣಿಕೆಯಾದಾಗ ಮಾತ್ರ ನಿಜಾರ್ಥದಲ್ಲಿ ಕಲಿಕೆ ಆಗುತ್ತದೆ ಎಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಹೇಳಿದರು. ಗ್ರಾಮದ ಆರ್‌ಟಿಜೆ ಶಿಕ್ಷಣ ಸಂಸ್ಥೆಗೆ ಸೋಮವಾರ ಭೇಟಿ ನೀಡಿ ಸಭೆ ನಡೆಸಿದ ಅವರು, ಮಕ್ಕಳ ಕಲಿಕೆಗೆ ಶಿಕ್ಷಕರು ಸೇತುವೆಯಾಗಿ ಕೆಲಸ ಮಾಡಬೇಕು. ಶೇ.೯೫ಕ್ಕಿಂತ ಹೆಚ್ಚು ಅಂಕ ಪಡೆದವರು ಮಾತ್ರ ಬುದ್ಧಿವಂತರು ಎಂದು ತಿಳಿಯುವುದು ಬಹುದೊಡ್ಡ ತಪ್ಪು. ದಯವಿಟ್ಟು ಅಂಥ ಭಾವನೆಯಿಂದ ಮೊದಲು ಹೊರಬನ್ನಿ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಮಾಜಿ ಶಾಸಕ ನರಸಿಂಹ ನಾಯಕ, ಪ್ರಾಚಾರ್ಯ ಮೋಹನ ಸಮೂದ್, ಲಕ್ಷಿö್ಮÃಕಾಂತ, ಯಶೋಮತಿ, ಕವಿತಾ, ದೀಪಿಕಾ, ವಿಶ್ವರಾಧ್ಯ, ರಾಮ ವಿಜಿನ್, ಮನೋಜ, ಕಾವ್ಯಾ, ಶ್ರೀದೇವಿ ಇತರರಿದ್ದರು. ನಂತರ ಮಕ್ಕಳೊಂದಿಗೆ ವಿಶೇಷ ಸಂವಾದ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net