

ರಾಯಬಾಗ: ಮಕ್ಕಳ ಮನೋದೈಹಿಕ ಹೊರೆ ಕಡಿಮೆ ಮಾಡಲು ಸರ್ಕಾರ ಶನಿವಾರದಂದು ಬ್ಯಾಗ್ ರಹಿತ ದಿನ ಜಾರಿಗೆ ತಂದಿದ್ದು, ಶಿಕ್ಷಕರು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕೆಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.
ತಾಲೂಕಿನ ನಂದಿಕುರಳಿ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ಮಾರ್ಟ್‌ಕ್ಲಾಸ್ ಉದ್ಘಾಟನೆ ಕಾರ್ಯಕ್ರಮ ಹಾಗೂ ಪ್ರತಿ ತಿಂಗಳ 3ನೇ ಶನಿವಾರ ಬ್ಯಾಗ್ ರಹಿತ ದಿನ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳ ಸಮಗ್ರ ಬೆಳವಣಿಗೆ, ಸಾಮಾಜಿಕ ಅರಿವು ಹಾಗೂ ಮಾನವೀಯ ವೌಲ್ಯ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ ಎಂದರು. ಕ್ಷೇತ್ರ ಶಿಕ್ಷಣಾಕಾರಿ ಪ್ರಭಾವತಿ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಬ್ಯಾಗ್ ರಹಿತ ದಿನ ಅನುಕೂಲವಾಗಲಿದೆ.
ವಿವಿಧ ಚಟುವಟಿಕೆಗಳ ಮೂಲಕ ಪಠ್ಯ ಮತ್ತು ಪಠ್ಯೇತರ ವಿಷಯಗಳ ಕಲಿಕಾಸಕ್ತಿ ಹೆಚ್ಚಿಸಲು ಈ ದಿನ ಪೂರಕವಾಗಲಿದೆ ಎಂದರು. ಗ್ರಾಪಂ ಅಧ್ಯಕ್ಷ ಅಮಿತ ಜಾಧವ, ಬಿಆರ್‌ಸಿ ಬಸವರಾಜ ಕಾಂಬಳೆ, ಮುಖ್ಯಶಿಕ್ಷಕ ಬಿ.ಎಂ. ಕುಂದರಗಿ, ಸಿಆರ್‌ಪಿ ವೈ.ಕೆ. ಭಜಂತ್ರಿ, ಪೃಥ್ವಿರಾಜ ಜಾಧವ, ಶ್ರವಣಕುಮಾರ ಕಾಂಬಳೆ, ಗಂಗಾರಾಮ ಹಿರೇಕುರಬರ, ಮಂಜು ಸಂಗೋಟೆ, ಸಿದ್ದಲಿಂಗ ಹಿರೇಕುರಬರ, ರಾಜು ಸಾವಂತ, ನಿಂಗಪ್ಪ ಬಾನಕರಿ, ಚಂದ್ರಕಾಂತ ವಂಜಿರೆ, ಬನ್ನಪ್ಪ ಹಿರೇಕುರಬರ, ಕೃಷ್ಣಪ್ಪ ದತ್ತವಾಡೆ ಇತರರಿದ್ದರು.