

ಎನ್.ಆರ್.ಪುರ: ಮಕ್ಕಳು ಆರೋಗ್ಯವಾಗಿರಬೇಕಾದರೆ ಶುದ್ಧ ಕುಡಿಯುವ ನೀರು ಅಗತ್ಯ ಎಂದು ಶಿವಮೊಗ್ಗ ಡಿವಿಎಸ್ ಕಾಲೇಜಿನ ನಿವತ್ತ ಪ್ರಾಚಾರ್ಯ ಶೇಷಗಿರಿ ತಿಳಿಸಿದರು.
ಹಾತೂರು ಅಂಗನವಾಡಿಗೆ ನೀರಿನ ಫಿಲ್ಟರ್ ಕೊಡುಗೆಯಾಗಿ ನೀಡಿ ಮಾತನಾಡಿ, ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಪ್ರತಿಯೊಬ್ಬರೂ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಬೇಕು ಎಂದು ಸಲಹೆ ನೀಡಿದರು. ಸೀತೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಖಂಡಕ ಉಮೇಶ್ ಮಾತನಾಡಿ, ಸರ್ಕಾರ ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದರು. ಎಸ್‌ಬಿಐ ಶಿವಮೊಗ್ಗ ಶಾಖೆ ಅಸಿಸ್ಟೆಂಟ್ ಮ್ಯಾನೇಜರ್ ವಾಣಿಶ್ರೀ, ಸೀತೂರು ಗ್ರಾಪಂ ಸದಸ್ಯ ಸಿದ್ದಪ್ಪ, ಹೊನ್ನೇಕೊಪ್ಪ ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅರುಣಕುಮಾರ್, ಮುಖ್ಯಶಿಕ್ಷಕಿ ಪದ್ಮಾ, ಅಂಗನವಾಡಿ ಕಾರ್ಯಕರ್ತೆ ಪವಿತ್ರಾ, ಸಹಾಯಕಿ ಮೇಘನಾ, ಗ್ರಾಮಸ್ಥರು ಇದ್ದರು.