ಮಕ್ಕಳ ಆರೋಗ್ಯ ರಕ್ಷಣೆ ಸಮಾಜದ ಹೊಣೆ

16 ckm 7
ಚಿಕ್ಕಮಗಳೂರು ತಾಲೂಕಿ ಹಂಗರವಳ್ಳಿ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.
Published on

ಚಿಕ್ಕಮಗಳೂರು: ಮಕ್ಕಳ ಆರೋಗ್ಯ ರಕ್ಷಣೆಯು ಸಮಾಜದ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಆರ್‌ಸಿಎಚ್‌ಒ ಡಾ. ಮಂಜುನಾಥ್ ಅಭಿಪ್ರಾಯಪಟ್ಟರು.

ಆಲ್ದೂರು ಸಮೀಪದ ಹಂಗರವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶ್ರೀ ಉದ್ದಂಡೇಶ್ವರ ಶಿಕ್ಷಣ ಸೇವಾ ಟ್ರಸ್ಟ್ನ ಸಹಯೋಗದಲ್ಲಿ ಸುಮಾರು ೩೦೦ ವಿದ್ಯಾರ್ಥಿಗಳ ಸಮಗ್ರ ಅರೋಗ್ಯ ತಪಾಸಣೆಗೆ ಚಾಲನೆ ನೀಡಿ ಮಾತನಾಡಿದರು.

ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಬೇಕಾದರೆ ಮೊದಲು ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಬೇಕು. ಆರೋಗ್ಯವಂತ ಮಕ್ಕಳಿಂದ ಮಾತ್ರ ಸದೃಢ ಸಮಾಜ, ದೇಶ ನಿರ್ಮಾಣ ಸಾಧ್ಯವಾಗುತ್ತದೆ. ಸದೃಢವಾದ ದೇಶ ನಿರ್ಮಾಣ ಮಾಡಲು ಸದೃಢವಾದ ಪ್ರಜೆಗಳನ್ನು ರೂಪಿಸಬೇಕು. ಸದೃಢವಾದ ಪ್ರಜೆಗಳನ್ನು ರೂಪಿಸಲು ಆರೋಗ್ಯವಂತ ಮಕ್ಕಳು ಸಮಾಜದಲ್ಲಿ ಇರಬೇಕು. ಇಂತಹ ಸಮಾಜವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಮಕ್ಕಳ ಅರೋಗ್ಯವನ್ನು ನಿರ್ಲಕ್ಷಿಸದೆ ಕಾಲಕಾಲಕ್ಕೆ ತಪಾಸಣೆ ನಡೆಸಿ, ಅವಶ್ಯವಿದ್ದಲ್ಲಿ ಸೂಕ್ತ ಚಿಕಿತ್ಸೆ ನೀಡಬೇಕು. ಸರ್ಕಾರವು ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಮಾಡುತ್ತಿದ್ದು, ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಹಂಗರವಳ್ಳಿಯಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ದಿನ ಕೈ ಜೋಡಿಸಿದ ಟ್ರಸ್ಟ್ನ ಕಾರ್ಯ ಶ್ಲಾಘನೀಯ. ಕಳೆದ ವರ್ಷ ಇದೇ ಶಾಲೆಯಲ್ಲಿ ೮೦ ಘಟಕಕ್ಕೂ ಹೆಚ್ಚು ರಕ್ತದಾನ ಮಾಡಿದ ಟ್ರಸ್ಟ್ನ ಪದಾಧಿಕಾರಿಗಳ ಕಾರ್ಯ ಮಾದರಿ ಎಂದರು.

ಶಾಲಾ ಮಕ್ಕಳಿಗೆ ಉಚಿತವಾಗಿ ರಕ್ತ ಪರೀಕ್ಷೆ, ನೇತ್ರ ತಪಾಸಣೆ, ಹಿಮೋಗ್ಲೋಬಿನ್, ದೈಹಿಕ ಬೆಳವಣಿಗೆ, ಅನಿಮಿಯಾ, ವಿಟಮಿನ್ ಎ ಕೊರತೆ ಸೇರಿದಂತೆ ಇನ್ನು ಮುಂತಾದ ಪರೀಕ್ಷೆಗಳನ್ನು ಜಿಲ್ಲಾ ಆಸ್ಪತ್ರೆಯ ತಜ್ಞವೈದ್ಯರಿಂದ ನಡೆಸಿ, ಕೆಲವು ಮಕ್ಕಳಿಗೆ ಉಚಿತವಾಗಿ ಔಷಧ ನೀಡಲಾಯಿತು.

ಮಕ್ಕಳ ಆರೋಗ್ಯ ಕಾರ್ಡ್ ತಯಾರಿಸಿ ಪ್ರತಿ ೪ ತಿಂಗಳಿಗೊಮ್ಮೆ ಮರು ತಪಾಸಣೆ ಕೈಗೊಳ್ಳಲಾಗುವುದು ಎಂದು ಹಿರಿಯ ವೈದ್ಯರಾದ ಡಾ. ಮೀರಾ ತಿಳಿಸಿದರು.

ತಪಾಸಣೆಯ ಸಂದರ್ಭದಲ್ಲಿ ಟ್ರಸ್ಟ್ನ ಅಧ್ಯಕ್ಷರಾದ ಪ್ರದೀಶ್, ದಿಲೀಪ್, ರಾಜು, ಎಸ್‌ಡಿಎಂಸಿ ಅಧ್ಯಕ್ಷ ರುದ್ರೇಗೌಡ, ಶಿಕ್ಷಕರಾದ ರಾಜೇಶ್ವರಿ, ಭಾರತಿ, ರಂಗಯ್ಯ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net