ಮಕ್ಕಳ ಆರೋಗ್ಯ ಕಾಪಾಡಲು ಲಸಿಕೆ ಅವಶ್ಯ

9..5
ಅರಟಾಳ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇಂದ್ರಧನುಷ್ ಲಸಿಕಾ ಅಭಿಯಾನಕ್ಕೆ ಐಗಳಿ ಪಿಎಚ್‌ಸಿ ವೈದ್ಯಾಕಾರಿ ಪೂರ್ಣಿಮಾ ಅಂಕಲಗಿ ಚಾಲನೆ ನೀಡಿದರು. ರೇಣುಕಾ ಗಾಣಿಗರ, ವಿಜಯಕುಮಾರ ಆಸಂಗಿ, ರಾಮಪ್ಪ ಪೂಜಾರಿ, ಮಾಲಾ ಕಾಂಬಳೆ ಇತರರಿದ್ದರು.
Published on

ಅರಟಾಳ: ಮಗುವಿಗೆ ಲಸಿಕೆ ಹಾಕಿಸುವುದರಿಂದ ಸಂಭಾವ್ಯ ರೋಗ ತಡೆಗಟ್ಟಬಹುದು ಎಂದು ಐಗಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಕಾರಿ ಪೂರ್ಣಿಮಾ ಅಂಕಲಗಿ ಹೇಳಿದರು.


ಗ್ರಾಮದ ಅಂಗನವಾಡಿ ಕೇಂದ್ರ ನಂ.1ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಇಂದ್ರಧನುಷ್ 5.0 ಲಸಿಕಾ ಅಭಿಯಾನದಲ್ಲಿ ಮಾತನಾಡಿ, ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರ/ಉಪಕೇಂದ್ರ ಹಾಗೂ ಅಂಗನವಾಡಿಗಳಲ್ಲಿ ಉಚಿತವಾಗಿ ಲಸಿಕೆ ಹಾಕಲಾಗುವುದು. ಲಸಿಕೆಯಿಂದ ದಡಾರ ಮತ್ತು ರುಬೆಲ್ಲಾದಂತಹ ಮಾರಕ ರೋಗ ತಡೆಗಟ್ಟಬಹುದು. 5 ವರ್ಷದೊಳಗಿನ ಮಕ್ಕಳ ಆರೋಗ್ಯ ಕಾಪಾಡಲು ಪಾಲಕರು ಲಸಿಕೆ ಹಾಕಿಸಬೇಕು ಎಂದರು.


ಎಎನ್‌ಎಂ ರೇಣುಕಾ ಗಾಣಿಗರ, ವಿಜಯಕುಮಾರ ಆಸಂಗಿ, ಗ್ರಾಪಂ ಸದಸ್ಯ ರಾಮಪ್ಪ ಪೂಜಾರಿ, ಹನುಮಂತ ಹಟ್ಟಿ, ಕಲ್ಲಪ್ಪ ಜಂಬಗಿ, ಅಂಗನವಾಡಿ ಕಾರ್ಯಕರ್ತೆ ಶಾಂತಾ ಕಟ್ಟಿಮನಿ, ಮುತ್ತವ್ವ ಪೂಜಾರಿ, ಮಾಲಾ ಕಾಂಬಳೆ, ಆಶಾ ಕಾರ್ಯಕರ್ತೆ ಅಮೃತಾ ಡಂಗಿ, ದಾಕ್ಷಾಯಿಣಿ ಕಾಂಬಳೆ, ವಿಜಯಲಕ್ಷ್ಮೀ ಕಾಂಬಳೆ, ಕವಿತಾ ಕಾಂಬಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net