ಮಕ್ಕಳ ಆಧಾರ್​ ಅಪ್​ಡೇಟ್​ಮಾಡಲು ಸೂಚನೆ

WEB LOGO
Published on

ವಿಜಯಪುರ : ಶಾಲೆಯಲ್ಲಿರುವ ಮಕ್ಕಳ ಆಧಾರ್​ ತಿದ್ದುಪಡಿ (ಶಾಲಾ ದಾಖಲಾತಿಯಂತೆ) ಯನ್ನು ಹಾಗೂ 5 ರಿಂದ 7 ವರ್ಷ ಹಾಗೂ 15 ರಿಂದ 17 ವರ್ಷ ಪೂರೈಸಿದ ಮಕ್ಕಳ ಕಡ್ಡಾಯ ಬಯೋಮೆಟ್ರಿಕ್ಸ್​ (ಜೈವಿಕ) ಅಪ್​ಡೇಟ್​ ಪ್ರಸಕ್ತ ಶೈಣಿಕ ವರ್ಷ ಮುಗಿಯುವುದರಲ್ಲಿ ಹತ್ತಿರದ ಆಧಾರ್​ ಸೇವಾ ಕೇಂದ್ರಗಳಲ್ಲಿ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 5 ರಿಂದ 18 ವರ್ಷದ ಮಕ್ಕಳ ಒಟ್ಟು 6,80,531 ಆಧಾರ್​ ಸೃಜನೆಯಾಗಿದ್ದು, ಅದರಲ್ಲಿ 5 ರಿಂದ 7 ವರ್ಷದ 1,19,978 ಹಾಗೂ 15 ರಿಂದ 17 ವರ್ಷದ ಮಕ್ಕಳ 36,250 ಒಟ್ಟು 1,56,228 ಕಡ್ಡಾಯ ಬಯೋಮೆಟ್ರಿಕ್ಸ್​ ಅಪ್​ಡೇಟ್​ಗೆ ಬಾಕಿ ಇದೆ. ಪಾಲಕರು ಕೂಡಲೇ ಹತ್ತಿರದ ಆಧಾರ್​ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಕಡ್ಡಾಯ ಬಯೋಮೆಟ್ರಿಕ್ಸ್​ ಅಪ್​ಡೇಟ್​ ಮಾಡಿಕೊಳ್ಳಬಹುದಾಗಿದೆ.

ಅದರಂತೆ, 10 ವರ್ಷಗಳ ಹಿಂದೆ ಆಧಾರ್​ ಸೃಜಿಸಲಾದ ನಾಗರಿಕರು ತಮ್ಮ ಗುರುತಿನ ಹಾಗೂ ವಿಳಾಸದ ಪುರಾವೆಗಳನ್ನು ಕಾಲೋಚಿತಗೊಳಿಸಲು ಯುಐಡಿಎಐ ಹೊಸದಾಗಿ ಪರಿಚಯಿಸಿದ ಪಿಒಐ/ ಪಿಒಎ ಅಪ್​ಡೇಟ್​ ಮಾಡಿಕೊಳ್ಳಬಹುದಾಗಿದ್ದು, ಜಿಲ್ಲೆಯಲ್ಲಿ 13,603 ಆಧಾರ್​ ಸಂಖ್ಯೆಗಳ ಮೊಬೈಲ್​ ನಂಬರ್​ ಕಾಲೋಚಿತಗೊಳಿಸಲು ಬಾಕಿ ಇವೆ. ಈ ಸೇವೆಯನ್ನು ಸಾರ್ವಜನಿಕರು ಆಧಾರ್​ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net