ಮಕ್ಕಳ ಅಭಿವೃದ್ಧಿಗೆ ಅಡಿಪಾಯ

28 YERRISWAMY 03
Published on

ಬಳ್ಳಾರಿ ; ಮಕ್ಕಳ ಅಭಿವೃದ್ಧಿಯು ಸಮುದಾಯ ಮತ್ತು ಆರ್ಥಿಕತೆಗೆ ಅಡಿಪಾಯವಾಗಿದೆ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.
ನಗರದ ಡಿಸಿ ಕಚೇರಿ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜೆಎಸ್‌ಡಬ್ಲ್ಯೂ ಫೌಂಡೇಶನ್ ಮತ್ತು ರೂಮ್ ಟು ರೀಡ್ ಇಂಡಿಯಾ ಸಹಯೋಗದಲ್ಲಿ ಜೆಎಸ್‌ಡಬ್ಲ್ಯೂ ರೂಮ್ ಟು ರೀಡ್ ಪ್ರಾಜೆಕ್ಟ್ ಅಡಿಯಲ್ಲಿ ಓದುವ ಅಭಿಯಾನ ಕ್ಕಾಗಿ ಸಂಚಾರಿ ಗ್ರಂಥಾಲಯಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳು ಸಮೃದ್ಧ ಮತ್ತು ಸುಸ್ಥಿರ ಸಮಾಜದ ಅಡಿಪಾಯವಾಗುತ್ತಾರೆ. ಸಮುದಾಯದ ಜನರು ಓದುವುದನ್ನು ನೋಡಿ ಮಕ್ಕಳು ಕೂಡ ಕಲಿಯುತ್ತಾರೆ ಈ ಕಾರ್ಯಕ್ರಮವು ಗ್ರಾಮೀಣ ಜನರಿಗೆ ಅನುಕೂಲವಾಗಲಿದೆ ಎಂದರು.
ಜೆಎಸ್‌ಡಬ್ಲ್ಯೂ ಫೌಂಡೇಶನ್ ಸಿಎಸ್‌ಆರ್ ಮುಖ್ಯಸ್ಥ ಪೆದ್ದಣ್ಣ ಬೀಡಲಾ ಮಾತನಾಡಿ, ಸಂಚಾರಿ ಗ್ರಂಥಾಲಯದ ವಾಹನವು ಉತ್ತಮ ಪುಸ್ತಕಗಳೊಂದಿಗೆ ಪ್ರಸ್ತುತ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ 20 ಗ್ರಾಮಗಳಲ್ಲಿ ಸಂಚರಿಸಲಿದೆ. ಪ್ರತಿ ಅರ್ಧ ದಿನ ಒಂದೊಂದು ಗ್ರಾಮದಲ್ಲಿ ಇದ್ದು, ನಮ್ಮ ತಂಡವು ಜನರಿಗೆ ಓದಿನ ಮತ್ತು ಶಿಕ್ಷಣದ ಮಹತ್ವವನ್ನು ತಿಳಿಸಿಕೊಡಲಿದ್ದಾರೆ. ಸಾರ್ವಜನಿಕರು ಈ ಅನುಕೂಲವನ್ನು ಸದುಪಯೋಗಪಡಿಸಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net