

ಯಾದಗಿರಿ: ಪ್ರತಿ ನಗರ ಮತ್ತು ಗ್ರಾಮಗಳಲ್ಲಿ ಐದು ವರ್ಷದ ಮಕ್ಕಳನ್ನು ಗುರುತಿಸಿ ಅತಿಸಾರ ನಿರ್ಜಲೀಕರಣದಿಂದ ಉಂಟಾಗುವ ಸಾವು ತಡೆಗೆ ಮತ್ತು ನಿಯಂತ್ರಣಕ್ಕಾಗಿ ಒಆರ್‌ಎಸ್ ಜಿಂಕ್ ಮಾತ್ರೆ ಕಡ್ಡಾಯವಾಗಿ ನೀಡಬೇಕು ಎಂದು ಜಿ¯್ಲÁ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಬಿರಾದಾರ ಹೇಳಿದರು.
ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿ¯್ಲÁಡಳಿತ, ಜಿಪಂ ಹಾಗೂ ಜಿ¯್ಲÁ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡ ಐಡಿಸಿಎಫ್ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಮನೆಗಳಿಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು ಮಾತ್ರೆ ವಿತರಿಸುತ್ತಿದ್ದು, ಇವುಗಳ ಲಾಭ ಪಡೆದುಕೊಳ್ಳಬೇಕು ಎಂದರು.
ಜಿ¯್ಲೆಯಾದ್ಯAತ ಜೂ.೧೬ರಂದು ಆರಂಭಗೊAಡ ಈ ಕಾರ್ಯಕ್ರಮ ಜುಲೈ ೩೧ರವರೆಗೆ ನಡೆಯಲಿದ್ದು, ಪ್ರತಿ ನಗರ ಮತ್ತು ಗ್ರಾಮಗಳಲ್ಲಿ ೫ ವರ್ಷದ ಮಕ್ಕಳನ್ನು ಗುರುತಿಸಿ ಒಆರ್‌ಎಸ್ ಜಿಂಕ್ ಪ್ಯಾಕೆಟ್ ಹಾಗೂ ಮಾತ್ರೆ ಮನೆ ಮನೆಗೆ ತೆರಳಿ ವಿತರಿ, ಕೈ ತೊಳೆಯುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಿದ್ದಾರೆ ಎಂದು ತಿಳಿಸಿದರು.
ಜಿ¯್ಲÁ ಆರ್‌ಸಿಎಚ್ ಅಧಿಕಾರಿ ಡಾ.ಮಲ್ಲಪ್ಪ ಕೆ.ನಾಯ್ಕಲ್ ಮಾತನಾಡಿ, ಜಿಂಕ್‌ಮಾತ್ರೆ ದಿನಕ್ಕೆ ೧ರಂತೆ ೧೪ ದಿನಗಳವರೆಗೆ ನೀಡಬೇಕು. ಇದು ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ೩ ತಿಂಗಳವರೆಗೆ ಭೇದಿಯಾಗದಂತೆ ತಡೆಯುತ್ತದೆ. ಮಗು ಚಡಪಡಿಕೆ, ಮಂಪರು ಅಥವಾ ಎಚ್ಚರ ತಪ್ಪಿದ್ದರೆ, ಕಣ್ಣುಗಳು ಗುಳಿಬಿದ್ದಂತೆ ಕಂಡು ಬಂದರೆ, ಮಗುವು ಅತೀವ ಬಾಯಾರಿಕೆ ಅಥವಾ ನೀರು ಕುಡಿಯಲು ಸಾಧ್ಯವಾಗದ ಪರಿಸ್ಥಿತಿ ಇದ್ದರೆ (೨ ತಿಂಗಳಿಗಿAತ ಕಡಿಮೆ ವಯಸ್ಸಿನ ಮಕ್ಕಳಿಗೆ ಅನ್ವಯಿಸುವುದಿಲ್ಲ) ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಕೊಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ವಿನುತಾ, ಅಂಗನವಾಡಿ ಮೇಲ್ವಿಚಾರಕಿ ರಜಿಯಾ ಬೇಗಂ, ಪ್ರಭಾರಿ ಡಿಎನ್‌ಒ ರತ್ನಮ್ಮ, ಪಿಎಚ್‌ಸಿಒ ಶಹಜಾದಿ, ಹಿರಿಯ ಆರೋಗ್ಯ ನಿರೀP್ಷÀಣಾಧಿಕಾರಿ ಹನಮಂತರಾವ್ ಕುಲ್ಕರ್ಣಿ, ಎಚ್‌ಐಒ ರವಿ ಬಂಡಿ, ಬಾಗಣ್ಣ, ಇಮಾನ್‌ವೆಲï ಪಿಎಚ್‌ಸಿಒ ಸಿಲ್ವಿಯಾ, ರಾಣೋಜಿ ಇತರರಿದ್ದರು.
ಜಿ¯್ಲÁ ಆರೋಗ್ಯ ಶಿP್ಷÀಣಾಧಿಕಾರಿ ತುಳಸಿರಾಮ ಚವ್ಹಾಣ್ ವಂದಿಸಿ, ನಿರೂಪಣೆ ಮಾಡಿದರು.