ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಮೂಡಿಸಿ

19 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಳ್ಳಿಗಾಡಿನ ಜನರಲ್ಲಿ ಇನ್ನೂ ಮೂಢನಂಬಿಕೆ ಜೀವಂತ ಇದೆ. ಹೀಗಾಗಿ ಮೂಢನಂಬಿಕೆ ಹೋಗಲಾಡಿಸಲು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಅಗತ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ ಹೇಳಿದರು.
ನಗರದ ಛತ್ರಪತಿ ಶಿವಾಜಿ ಮಹಾರಾಜ ಪದವಿ ಕಾಲೇಜು ಸಭಾಂಗಣದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ಮರಾಠ ವಿದ್ಯಾಪ್ರಸಾರಕ ಮಂಡಳ, ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಲಾ, ವಾಣಿಜ್ಯ ಪದವಿ ಕಾಲೇಜು ಹಾಗೂ ಜ್ಞಾನಯೋಗಿ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ಆಂದೋಲನ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಪವಾಡ ರಹಸ್ಯ ಬಯಲು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಾಂಡುರಂಗ ಜಟಗಣ್ಣವರ ಮಾತನಾಡಿ, ಮೂಢನಂಬಿಕೆಗಳು ಸಮಾಜದ ಸ್ವಾಸ್ಥೃ ಕೆಡಿಸುತ್ತಿರುವುದನ್ನು ಪ್ರಬಲವಾಗಿ ವಿರೋಧಿಸಿ ಜನರ ಮನಸ್ಸನ್ನು ವೈಜ್ಞಾನಿಕ ಮನೋಭಾವದ ಕಡೆಗೆ ಸೆಳೆದು ಜಾಗೃತಿ ಉಂಟುಮಾಡಲು ಭಾರತ ಜ್ಞಾನ ವಿಜ್ಞಾನ ಸಮಿತಿ ಕಾರ್ಯಕ್ರಮ ರೂಪಿಸುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದರು.
ಪವಾಡ ತಜ್ಞ ಡಾ. ಮಂಜುನಾಥ ಬಾರಕೇರ ವಿಜ್ಞಾನದ ಚಟುವಟಿಕೆಗಳನ್ನು ಪ್ರಾಯೋಗಿಕವಾಗಿ ತಿಳಿಸಿ, ಪವಾಡದ ಹಿಂದಿರುವ ರಹಸ್ಯ ತಿಳಿಸಿದರು. ಸಮಿತಿ ಜಿಲ್ಲಾ ಅಧ್ಯಕ್ಷ ಗುರು ತಿಗಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಎಂ.ಎಸ್. ಗಾಣಿಗೇರ, ಹಸೀನ ಸಮುದ್ರಿ, ಲೂಸಿ ಸಾಲ್ಡಾನ, ಪ್ರಮೀಳಾ ಜಕ್ಕಣ್ಣವರ, ಭೀಮಪ್ಪ ಕಾಸಾಯಿ, ಮಲ್ಲಿಕಾರ್ಜುನ ಉಪ್ಪಿನ, ಅಕ್ಬರಲಿ ಸೋಲಾಪೂರ, ಶಾಂತಾ ಶೀಲವಂತ, ಕಾಶಪ್ಪ ದೊಡವಾಡ, ಶಿವಾನಂದ ಭಜಂತ್ರಿ, ಚಂದ್ರಶೇಖರ ಮಾಡಳ್ಳಿ, ಎಲ್.ಐ. ಲಕ್ಕಮ್ಮನವರ, ನಿಂಗಪ್ಪ ಹಡಪದ, ನಂದಕುಮಾರ ದ್ಯಾಪೂರ, ಇತರರು ಇದ್ದರು.
ಎಂ.ಆರ್. ಕಬ್ಬೇರ ಸ್ವಾಗತಿಸಿದರು. ಗಿರಿಜಾ ಪಲ್ಲೇದ ನಿರೂಪಿಸಿದರು. ವಿ.ಎನ್. ಕೀರ್ತಿವತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net