

ಕಾಗವಾಡ: ತಾಲೂಕಿನ ಜುಗೂಳ ಗ್ರಾಮದ ಹನುಮಾನ ಮಂದಿರದ ಮೇಲ್ಛಾವಣಿ ನಿರ್ಮಿಸುವಂತೆ ಮಂದಿರ ಕಮಿಟಿಯ ಸದಸ್ಯರು ಸಂಪರ್ಕಿಸಿದ ಕೂಡಲೇ ನಮ್ಮ ಫೌಂಡೇಶನ್ ವತಿಯಿಂದ ೫ ಲಕ್ಷ ರೂ. ನೀಡಲಾಗಿದ್ದು, ಈಗ ಆ ಮೇಲ್ಛಾವಣಿ ಉದ್ಘಾಟಿಸಲಾಗಿದೆ. ಮುಂದೆಯೂ ಮಂದಿರದ ಅಭಿವೃದ್ಧಿಗಾಗಿ ಸಹಕಾರ ನೀಡುವುದಾಗಿ ಮಾಜಿ ಸಚಿವ ಶ್ರೀಮಂತ ಪಾಟೀಲ ಭರವಸೆ ನೀಡಿದರು.
ಹನುಮಾನ ಮಂದಿರದಲ್ಲಿ ಶನಿವಾರ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ೫ ಲಕ್ಷ ರೂ.ವೆಚ್ಚದ ಮೇಲ್ಛಾವಣಿ ಉದ್ಘಾಟಿಸಿ ಮಾತನಾಡಿದರು.
ಮುಖಂಡ ಅರುಣ ಗಣೇಶವಾಡ ಮಾತನಾಡಿ, ಶ್ರೀಮಂತ ಪಾಟೀಲ ಸಚಿವ ಮತ್ತು ಶಾಸಕರಾಗಿದ್ದಾಗ ನಮ್ಮ ಗ್ರಾಮಕ್ಕೆ ಸಾಕಷ್ಟು ಅನುದಾನ ನೀಡಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಮೇಲ್ಛಾವಣಿ ನಿರ್ಮಿಸಲು ಸಹಾಯ ಕೇಳಿದಾಗ ಕೂಡಲೇ ತಮ್ಮ ಫೌಂಡೇಶನ್ ವತಿಯಿಂದ ೫ ಲಕ್ಷ ರೂ. ನೀಡಿದ್ದಾರೆ. ಅದಕ್ಕಾಗಿ ಗ್ರಾಮಸ್ಥರ ಪರವಾಗಿ ಅಭಿನಂದಿಸುತ್ತೇನೆ ಎಂದರು.
ಮುಖಂಡ ದಾದಾ ಪಾಟೀಲ, ಗ್ರಾಮದ ಮುಖಂಡರು, ಮಂದಿರ ಕಮಿಟಿ ಅಧ್ಯಕ್ಷ, ಉಪಾಧ್ಯಕ್ಷ ಇತರರಿದ್ದರು.