ಮಂದಿರ ನಿರ್ಮಾಣದ ಕನಸು ಸಾಕಾರ

05 svr 01 a
Published on

ಸವಣೂರ: ರಾಮ ಮಂದಿರ ನಿರ್ವಣಕ್ಕೆ ಶಂಕುಸ್ಥಾಪನೆ ಕೈಗೊಳ್ಳುವ ಮೂಲಕ ರಾಷ್ಟ್ರದ ಜನರ ದಶಕಗಳ ಕನಸನ್ನು ಬಿಜೆಪಿ ಸರ್ಕಾರ ಸಾಕಾರಗೊಳಿಸಿದೆ ಎಂದು ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಮಲ್ಲಾರಪ್ಪ ತಳ್ಳಿಹಳ್ಳಿ ತಿಳಿಸಿದರು.

ಪಟ್ಟಣದ ಬಾರಕೇರ ಓಣಿಯ ಶ್ರೀರಾಮ ದೇವರ ಗುಡಿಯಲ್ಲಿ ಬಿಜೆಪಿ ತಾಲೂಕು ಹಾಗೂ ಯುವ ಮೋರ್ಚಾ ವತಿಯಿಂದ ಬುಧವಾರ ಏರ್ಪಡಿಸಿದ್ದ ಶ್ರೀರಾಮ ದೇವರಿಗೆ ವಿಶೇಷ ಪೂಜೆ ಹಾಗೂ ಕರ ಸೇವಕರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

1992-93 ಹಾಗೂ 1997-98ರಲ್ಲಿ ಕರಸೇವಕರಾಗಿ ಅಯೋಧ್ಯೆಗೆ ತೆರಳಿದ್ದ ಬಸವರಾಜ ಜೋಶಿ, ಮಹೇಶ ಮುದಗಲ್, ಚನ್ನಬಸಯ್ಯ ದುರ್ಗದಮಠ, ಅನಿಲ ಬಾದಾಮಿ, ಹನುಮಂತಗೌಡ ಮುದಿಗೌಡ್ರ, ಭಗತ್​ಸಿಂಗ್ ತುಳಸಿಖಾನಿ, ಸಂಗಪ್ಪ ಎರೇಶಿಮಿ, ನಿಂಗಪ್ಪ ಮಿಟಯಗಾರ, ಇಂದ್ರಪ್ರಸಾದ ಜಮಾದಾರ, ವಿಜಯಕುಮಾರ ಮೇದಾರ ಅವರನ್ನು ಬಿಜೆಪಿ ತಾಲೂಕಾಧ್ಯಕ್ಷ ಗಂಗಾಧರ ಬಾಣದ ಹಾಗೂ ಪದಾಧಿಕಾರಿಗಳು ಸನ್ಮಾನಿಸಿದರು.

ಯುವಮೋರ್ಚಾ ತಾಲೂಕಾಧ್ಯಕ್ಷ ಹರೀಶ ಕ್ಷೌರದ, ಪದಾಧಿಕಾರಿಗಳಾದ ಶೋಭಾ ನಿಸ್ಸೀಮಗೌಡ್ರ, ಪ್ರವೀಣ ಚರಂತಿಮಠ, ರಾಮಣ್ಣ ಸಂಕ್ಲಿಪೂರ, ಶ್ರೀನಿವಾಸ ಗಿತ್ತೆ, ಪ್ರಕಾಶ ಮುದಿಗೌಡ್ರ, ಗಿರೀಶ ಬಗರೆ, ವಿನಾಯಕ ಬುಶೆಟ್ಟಿ, ವಿನಯ ಬುಶೆಟ್ಟಿ, ರಾಘವೇಂದ್ರ ಬಾಬನಿ, ಸುನೀಲ ಕಲಾಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net