ಮಂದಾರ್ತಿಯಲ್ಲಿ ಉಪಠಾಣೆ ತೆರೆಯಿರಿ; ಗೃಹ ಸಚಿವರಿಗೆ ಮನವಿ

TTH WEB
Published on

ತೀರ್ಥಹಳ್ಳಿ: ಉಡುಪಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ಮಂದಾರ್ತಿಯಲ್ಲಿ ಪೋಲಿಸ್ ಉಪಠಾಣೆಯನ್ನು ತೆರೆಯುವಂತೆ ಮಂದಾರ್ತಿ ದೇವಸ್ಥಾನದ ಮೊಕ್ತೇಸರರಾದ ಧನಂಜಯ ಶೆಟ್ಟಿ ಅವರು ಮಂಗಳವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಗುಡ್ಡೆಕೊಪ್ಪದ ಸಚಿವರ ಮನೆಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು. ತೀರ್ಥಹಳ್ಳಿ ಕೆಡಿಪಿ ಸದಸ್ಯ ತಳಲಿ ಪ್ರಸಾದ್ ಶೆಟ್ಟಿ, ರಾಘವೇಂದ್ರ ಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net