ಮಂದಕೃಷ್ಣ ಸಮುದಾಯದ ದಿಕ್ಕು ತಪ್ಪಿಸುತ್ತಿದ್ದಾರೆ

Pressmeet
Published on

ಚಿತ್ರದುರ್ಗ: ನರೇಂದ್ರ ಮೋದಿ ಅವರು 3ನೇ ಬಾರಿ ಪ್ರಧಾನಿಯಾದರೆ ಮಾತ್ರ ಮಾದಿಗರ ಮೀಸಲಾತಿ ವರ್ಗೀಕರಣ ಸಾಧ್ಯ ಎಂಬ ಮಂದಕೃಷ್ಣ ಮಾದಿಗ ಅವರ ಹೇಳಿಕೆಯನ್ನು ರಾಜ್ಯ ಸಾಮಾಜಿಕ ಸಂಘರ್ಷ ಸಮಿತಿ ಅಧ್ಯಕ್ಷ ಕೆ.ಕುಮಾರ್ ಖಂಡಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಮೀಸಲಾತಿ ವರ್ಗೀಕರಣಕ್ಕಾಗಿ ಮೂರ‌್ನಾಲ್ಕು ದಶಕಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಈವರೆಗೂ ಆಗಿಲ್ಲ. ಅವರ ಹೇಳಿಕೆ ದಲಿತರನ್ನು ದಿಕ್ಕು ತಪ್ಪಿಸುವ ಕುತಂತ್ರ ಎಂದು ದೂರಿದರು.

ದಲಿತ ಮುಖಂಡ ಡಿ.ದುರುಗೇಶ್ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ವೇಳೆ ಬಿಜೆಪಿ ಏಕೆ ಆ ಕೆಲಸ ಮಾಡಲಿಲ್ಲ. ಚುನಾವಣೆ ವೇಳೆ ಮಾತ್ರ ಸಮುದಾಯ ನೆನಪಿಗೆ ಬರುತ್ತದೆ. ಕೋಮುಗಲಭೆ ಸೃಷ್ಟಿಸಿ ಜಾತಿ-ಧರ್ಮ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಈ ಮೂಲಕ ಮತದಾರರ ಗಮನ ಸೆಳೆಯಲು ಮುಂದಾಗಿದೆ. ಇದರ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸಲಿದ್ದೇವೆ ಎಂದರು.

ಚಿಕ್ಕಣ್ಣ, ಸುಧಾಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net