ಮಂತ್ರಿಯಾಗಲು ಏನು ಮಾಡಬೇಕು? ಶಾಸಕ ಯತ್ನಾಳ ಮಾತು ಆಲಿಸಿ...!

YATNAL NEWS
Published on

ವಿಜಯಪುರ: ಮಂತ್ರಿಯಾಗಬೇಕಾದರೆ ದೆಹಲಿಗೆ ಹೋಗಿ ಕುಳಿತುಕೊಳ್ಳಬೇಕು, ಮತ್ತೆ ಏನೇನೋ ಇಟ್ಟುಕೊಂಡು ಕೂರಬೇಕು, ಅದೆಲ್ಲಾ ನನ್ನಿಂದ ಆಗಲ್ಲ, ಸಂಪುಟ ವಿಸ್ತರಣೆಯಾಗಲಿ, ಆಮೇಲೆ ನನ್ನ ವಿಚಾರ ಹೇಳುತ್ತೇನೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿಕ್ರಿಯಿಸಿದ್ದಾರೆ.

ಸಚಿವ ಸ್ಥಾನಕ್ಕಾಗಿ ಸಿಎಂ ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ಮನೆ ಬಾಗಿಲಿಗೆ ಹೋಗಿಲ್ಲ. ಯಾರು ಮಂತ್ರಿಯಾಗುತ್ತಾರೆ, ಹೇಗೆ ಆಗುತ್ತಾರೆಂದು ನನಗೆ ಗೊತ್ತು. ಅದೊಂದು ದೊಡ್ಡ ಕಥೆ ಇದೆ. ಕಾಲ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದು ಬುಧವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ‘ಕ್ರಾಸ್‌ಬೀಡ್’ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯತ್ನಾಳ, ಸಿಎಂ ಸಿದ್ದರಾಮಯ್ಯ ಅವರ ಮೇಲೆಯೇ ನನಗೆ ಅನುಮಾನ. ರಾಹುಲ್ ಗಾಂಧಿ, ಸೋನಿಯಾಗಾಂಧಿ ಪಾರ್ಟಿಗೆ ಸೇರಿದ್ದು ಅವರದ್ದೂ ಪಾಲಿದೆ ಎನಿಸುತ್ತಿದೆ ಎಂದರಲ್ಲದೇ ಮುಂದುವರಿದು ಸಿದ್ದರಾಮಯ್ಯ ಒಳ್ಳೆಯ ನಾಯಕ ಎಂದರು.

ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ಅನುಷ್ಟಾನಗೊಳ್ಳಬೇಕು. ಉತ್ತರ ಪ್ರದೇಶ ಮಾದರಿಯಲ್ಲಿ ಲವ್ ಜಿಹಾದ್ ತಡೆಯಬೇಕು. ಕಠಿಣ ಕಾನೂನು ಜಾರಿಯಾದಾಗ ಮಾತ್ರ ಮತಾಂತರ ತಡೆಯಲು ಸಾಧ್ಯ. ದೆಹಲಿ ಜಾಮಿಯಾ ಮಸೀದಿ ಮೌಲ್ವಿಯೊಬ್ಬರು ಹಿಂದುಗಳಿಗೆ ಹೆಣ್ಣು ಸಿಗದಂತೆ ಮಾಡುವುದಾಗಿ ಹೇಳಿದ್ದಾರೆ. ಅವರಿಗೆ ಹೆಣ್ಣು ಸಿಗದಂತೆ ಮಾಡುತ್ತೇವೆಂದು ಯತ್ನಾಳ ಸವಾಲೆಸೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net