ಮಂತ್ರಿಗಳ ವಿರುದ್ಧ ರಾಯರಡ್ಡಿ ಗರಂ !

RAYARADDi
Published on

ಕೊಪ್ಪಳ:ಸಿದ್ದರಾಮಯ್ಯ ಕಾಂಗ್ರೆಸ್ ಸೇರಿ ಎರಡು ಬಾರಿ ಸಿಎಂ ಆಗಿದ್ದಾರೆ. ಇದಕ್ಕೆ ಕಾಂಗ್ರೆಸ್‌ನ ಹಳಬರು ಏನನಬೇಡ. ನನ್ನ ಹಿಂದೆ ಓಡಾಡಿದವರೆಲ್ಲ ಮಂತ್ರಿಗಳಾಗಿದ್ದಾರೆ. ಅವರ ಅಪ್ಪಂದಿರ ಜತೆ ನಾನು ಕೆಲಸ ಮಾಡಿದವನು. ಈಗ ಇವರು ನಮ್ಮ ಮುಂದೆ ಧಿಮಾಕು ಮಾಡಿಕೊಂಡು ಓಡಾಡುತ್ತಿದ್ದಾರೆಂದು ಶಾಸಕ ಬಸವರಾಜ ರಾಯರಡ್ಡಿ ಹತಾಶೆ ವ್ಯಕ್ತಪಡಿಸಿದರು.


ಕುಕನೂರು ತಾಲೂಕಿನ ತಳಕಲ್‌ನಲ್ಲಿ ಬುಧವಾರ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು. ಕಾರ್ಯಕರ್ತರು ನೀವು ಮಂತ್ರಿಯಾಗೋದು ಯಾವಾಗ ಎಂದಿದ್ದಕ್ಕೆ ತಮ್ಮ ಅಸಮಧಾನ ಹೊರಹಾಕಿದರು.

ಕಾರ್ಯಕರ್ತರು ದುಃಖಪಡಬೇಡಿ. ಒಮ್ಮೊಮ್ಮೆ ಮಂತ್ರಿ ಆಗಲು ಆಗಲ್ಲ. ಅದಕ್ಕೆ ಹಣರಬರಹ ಬೇಕು. ದೇವೇಗೌಡರ ಕ್ಯಾಬಿನೆಟ್‌ನಲ್ಲಿ ನಾನು ಸಚಿವನಾಗಿದ್ದೆ. ಈ ಕುಮಾರ ಸ್ವಾಮಿ ಆಗ ನನ್ನ ಪಕ್ಕ ನಿಲ್ಲೊದಕ್ಕೆ ಹೆದರುತ್ತಿದ್ದ. ಏನು ಮಾಡುವುದು ಅವನ ಹಣೆಬರಹದಲ್ಲಿ ಬರೆದಿತ್ತು ಅದಕ್ಕೆ ಮುಖ್ಯಮಂತ್ರಿ ಆಗಿಬಿಟ್ಟ. ಅದರಂತೆ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ ಮೇಲೆ ಎರಡು ಬಾರಿ ಸಿಎಂ ಆದರು. ಇದಕ್ಕೆ ಮೂಲ ಕಾಂಗ್ರೆಸ್‌ನವರು ಏನನಬೇಡ ಹೇಳಿ ? ಎಲ್.ಕೆ.ಅಡ್ವಾಣಿ ಬಿಜೆಪಿ ಕಟ್ಟಿ ಸತ್ತ. ಆದರೆ, ನರೇಂದ್ರ ಮೋದಿ ಪ್ರಧಾನಿ ಆಗಿಬಿಟ್ಟ ಎಂದು ಎಲ್ಲರನ್ನು ಏಕ ವಚನದಲ್ಲಿ ಸಂಬೋಧಿಸಿ ಅಸಮಾಧಾನ ಹೊರಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net