

ಬೆಂಗಳೂರು: ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಕೈಗಾರಿಕಾ ಪ್ರದೇಶ ಮತ್ತು ಸರ್ಕಾರಿ ಸ್ವತ್ತಿನ 4.29 ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಮಂತ್ರಿ ಗ್ರೀನ್ಸ್ ಅಪಾರ್ಟ್ವೆುಂಟ್ ಮತ್ತು ಮಂತ್ರಿ ಮಾಲ್ ನಿರ್ವಿುಸಲಾಗಿದೆ ಎಂಬ ಆರೋಪ ವಾಸ್ತವ ಎಂಬ ಸಂಗತಿ ಬಹಿರಂಗಗೊಂಡಿದೆ. ಬೆಂಗಳೂರು ಪ್ರಾದೇಶಿಕ ಆಯುಕ್ತರು ಹಾಗೂ ಸಕ್ಷಮ ಪ್ರಾಧಿಕಾರದ ನ್ಯಾಯಾಲಯ ಇದನ್ನು ಖಚಿತಪಡಿಸಿದೆ. ಅಲ್ಲದೆ, ಸ್ವತ್ತನ್ನು ವಶಪಡಿಸಿಕೊಳ್ಳುವಂತೆ ಸೂಚಿಸಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್ 2016ರಲ್ಲಿ ಮಂತ್ರಿಮಾಲ್ ವಿರುದ್ಧ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರು ದಾಖಲಿಸಿದ್ದರು. ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಈ ಹಿಂದೆ ಇದ್ದ ರಾಜಾ ಮಿಲ್ಗೆ ಸೇರಿದ್ದ 3.31 ಎಕರೆ ಸ್ವತ್ತು ಹಾಗೂ ಪಕ್ಕದ ಹನುಮಂತಪುರ ಗ್ರಾಮಕ್ಕೆ ಸೇರಿದ 37 ಗುಂಟೆ ಜಾಗ ಸೇರಿ ಒಟ್ಟು 4.29 ಎಕರೆ ಪ್ರದೇಶ ವನ್ನು ಅತಿಕ್ರಮಿಸಿಕೊಂಡು ಮೆ. ಹಮಾರಾ ಶೆಲ್ಟರ್ಸ್ ಎಂಬ ಸಂಸ್ಥೆ ಮಂತ್ರಿ ಸ್ಕ್ವೇರ್ ಮಾಲ್ ಹಾಗೂ ಮಂತ್ರಿ ಗ್ರೀನ್ಸ್ ಅಪಾರ್ಟ್ವೆುಂಟ್ ನಿರ್ವಿುಸಿದೆ. ಕೈಗಾರಿಕಾ ಪ್ರದೇಶಗಳನ್ನು ವಸತಿ ಪ್ರದೇಶವಾಗಿ ಮಾರ್ಪಡಿಸಲು ಸಾಧ್ಯವಿಲ್ಲ ಎಂದು ದೂರಿನಲ್ಲಿ ವಿವರಿಸಿದ್ದರು.
ವಿಚಾರಣೆ ನಡೆಸಿದ ಪ್ರಾದೇಶಿಕ ಆಯುಕ್ತರು ಹಾಗೂ ಸಕ್ಷಮ ಪ್ರಾಧಿಕಾರ ನ್ಯಾಯಾಲಯ ಜ.30ರಂದು ತೀರ್ಪು ನೀಡಿದ್ದು, ಭೂಮಿ ಒತ್ತುವರಿ ಮಾಡಿಕೊಳ್ಳಲಾಗಿದ್ದು, ತೆರವುಗೊಳಿಸುವಂತೆ ಆದೇಶಿಸಿದೆ.
ಹನುಮಂತಪುರ ಗ್ರಾಮದ ಸರ್ವೆ ನಂ.56ರಲ್ಲಿರುವ 37 ಗುಂಟೆ ಸರ್ಕಾರಿ ಕೆರೆ (ಜಕ್ಕರಾಯನ ಕೆರೆ) ಜಾಗವನ್ನು ಮತ್ತು ಜಕ್ಕಸಂದ್ರ ಗ್ರಾಮ ನಕಾಶೆಯಂತೆ ಹಾದುಹೋಗಿರುವ ಗ್ರಾಮದ ರಸ್ತೆ 3.31 ಎಕರೆ ವಿಸ್ತೀರ್ಣವನ್ನು ಬಿಬಿಎಂಪಿ ಸ್ವತ್ತು ಎಂದು ಘೋಷಿಸಿದೆ. ಬಿಬಿಎಂಪಿ ಆಯುಕ್ತರು ಈ ಕುರಿತು ಸೂಕ್ತ ನಮೂದು ಮಾಡಿ ಸ್ವತ್ತಿನಲ್ಲಿರುವ ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.
ಈಗ ಘೊಷಣೆಯಾಗಿರುವ ಸರ್ಕಾರಿ ಭೂಮಿಯಲ್ಲಿ ಎಷ್ಟು ಪ್ರಮಾಣದಲ್ಲಿ ಮಂತ್ರಿ ಗ್ರೀನ್ಸ್ ಅಪಾರ್ಟ್ವೆುಂಟ್ ಹಾಗೂ ಮಂತ್ರಿ ಸ್ಕೆ್ವೕರ್ ಮಾಲ್ ನಿರ್ವಿುಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಈ ಕುರಿತು ಸೂಕ್ತ ಪರಿಶೀಲನೆ ನಂತರ ವಿಚಾರ ತಿಳಿಯಬೇಕಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
2016ರಲ್ಲಿ ನಾನು ಮಾಧ್ಯಮ ಮಿತ್ರರ ಸಮ್ಮುಖದಲ್ಲಿ ಅಂದಾಜು 4,300 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿ ಅಕ್ರಮ ಬಯಲಿಗೆಳೆದಿದ್ದ ಬೃಹತ್ ಹಗರಣಕ್ಕೆ ಕಾನೂನಾತ್ಮಕ ಗೆಲುವು ಸಿಕ್ಕಿದೆ. ಈ ಆಸ್ತಿ 400 ಕೋಟಿ ರೂ. ಮೌಲ್ಯ ಹೊಂದಿದೆ. | ಎನ್.ಆರ್. ರಮೇಶ್, ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ನ್ಯಾಯಾಲಯದ ಆದೇಶವನ್ನು ನೂರಕ್ಕೆ ನೂರು ಪಾಲಿಸಲಾಗುವುದು. ಎನ್.ಆರ್. ರಮೇಶ್ ಅವರ ದೂರಿನ ಮೇರೆಗೆ ಈ ವಿಚಾರಣೆ ನಡೆದಿದೆ. ಆದೇಶದ ಪ್ರತಿ ಇನ್ನೂ ಸಿಕ್ಕಿಲ್ಲ. ಆಯುಕ್ತರ ಜತೆಗೆ ರ್ಚಚಿಸಿ ಕ್ರಮಕ್ಕೆ ಮುಂದಾಗುತ್ತೇವೆ. ನ್ಯಾಯಾಲಯದಲ್ಲೂ ಹೋರಾಟ ಮುಂದುವರಿಸುತ್ತೇವೆ. | ಎಂ. ಗೌತಮ್ ಕುಮಾರ್ ಬಿಬಿಎಂಪಿ ಮೇಯರ್