

ಚಿತ್ರದುರ್ಗ: ಬಡವರ ಆಸ್ತಿ ಕಬಳಿಸಿರುವ ಆರೋಪ ಎದುರಿಸುತ್ತಿರುವ ಡಿ.ಸುಧಾಕರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕರುನಾಡ ವಿಜಯಸೇನೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ದಲಿತ ಮತ್ತು ಬ್ರಾಹ್ಮಣರನ್ನು ಅವಹೇಳನವಾಗಿ ನಿಂದಿಸಿರುವುದು ಖಂಡನೀಯ ಎಂದು ಘೋಷಣೆ ಕೂಗಿದರು.
ಅಹಿಂದ ಮತಗಳನ್ನು ಪಡೆದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಮುಂದುವರೆಯುವ ನೈತಿಕತೆ ಸುಧಾಕರ್ ಅವರಿಗಿಲ್ಲ. ದೌರ್ಜನ್ಯ, ವಂಚನೆ ಪ್ರಕರಣ ಸಂಬಂಧ ಅವರನ್ನು ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿದರು.
ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಾ, ಪದಾಧಿಕಾರಿಗಳಾದ ಜಗದೀಶ್, ಮಹಮದ್ ರಫೀ, ಧ್ರುವಕುಮಾರ್, ಹರ್ಷ, ವಿಶ್ವನಾರಾಯಣಮೂರ್ತಿ, ಪ್ರದೀಪ್, ಅವಿನಾಶ್, ಕೋಟೇಶ್, ಅಭಿಷೇಕ್ ಇತರರಿದ್ದರು.