ಮಂತ್ರಾಲಯಕ್ಕೆ ಟಿಟಿಡಿ ದೇವರ ವಿಗ್ರಹ

05-08-Shiva-1
ತಿರುಮಲ ತಿರುಪತಿ ದೇವಸ್ಥಾನದಿಂದ ತರಲಾದ ಶ್ರೀನಿವಾಸ ದೇವರು, ಭೂದೇವಿ, ಲಕ್ಷ್ಮಿದೇವಿ ವಿಗ್ರಹಗಳಿಗೆ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿನ ಉಂಜಲ ಮಂಟಪದಲ್ಲಿಟ್ಟು ಶನಿವಾರ ವಿಶೇಷ ಪೂಜೆ ನೆರವೇರಿಸಲಾಯಿತು. ಶ್ರೀಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು, ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್, ಟಿಟಿಡಿ ದಾಸ ಸಾಹಿತ್ಯ ಪ್ರೊಜೆಕ್ಟ್‌ನ ವಿಶೇಷಾಕಾರಿ ಪಗಡಾಲ ಆನಂದತೀರ್ಥಾಚಾರ್ ಇದ್ದರು.
Published on

ರಾಯಚೂರು: ತಿರುಮಲ ತಿರುಪತಿ ದೇವಸ್ಥಾನದಿಂದ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ತರಲಾದ ಶ್ರೀನಿವಾಸ ದೇವರು, ಭೂದೇವಿ, ಲಕ್ಷ್ಮಿದೇವಿ ವಿಗ್ರಹಗಳಿಗೆ ಶ್ರೀಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಶನಿವಾರ ಪುಷ್ಪಾರ್ಚನೆ ಮತ್ತು ವಿಶೇಷ ಪೂಜೆ ನೆರವೇರಿಸಿದರು.
ಟಿಟಿಡಿ ದಾಸ ಸಾಹಿತ್ಯ ಪ್ರೊಜೆಕ್ಟ್‌ನ ವಿಶೇಷಾಕಾರಿ ಪಗಡಾಲ ಆನಂದತೀರ್ಥಾಚಾರ್ ಹಾಗೂ ಪುರೋಹಿತರು ಟಿಟಿಡಿಯಿಂದ ತಂದ ವಿಗ್ರಹಗಳನ್ನು ಮುಖ್ಯದ್ವಾರದಿಂದ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಶ್ರೀಮಠಕ್ಕೆ ತೆಗೆದುಕೊಂಡು ಹೋಗಲಾಯಿತು.
ನಂತರ ಉಂಜಲಾ ಮಂಟಪದಲ್ಲಿ ವಿಗ್ರಹಗಳನ್ನಿಟ್ಟು ವಿಶೇಷ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪಗಡಾಲ ಆನಂದತೀರ್ಥಾಚಾರ್ಯಗೆ ದಾಸ ಸಾಹಿತ್ಯದಲ್ಲಿ ಮಾಡಿರುವ ಸೇವೆಯನ್ನು ಗುರುತಿಸಿ ಶ್ರೀಮಠದಿಂದ ಹರಿದಾಸ ಸಾಹಿತ್ಯ ಭೂಷಣ ಬಿರುದು ನೀಡಿ ಶ್ರೀಗಳು ಸನ್ಮಾನಿಸಿ, ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಶ್ರೀಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್, ವೆಂಕಟೇಶ ಜೋಷಿ, ಡಾ.ಎನ್.ವಾದಿರಾಜಾಚಾರ್ ಹಾಗೂ ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net