

ಚಿತ್ರದುರ್ಗ: ಶ್ರೀರಾಮಮಂದಿರ ಲೋಕಾರ್ಪಣೆ ಅಂಗವಾಗಿ ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ನಗರದ ಸರಸ್ವತಿಪುರಂ ಉದ್ಯಾನದ ಸುಬ್ರಮಣ್ಯಸ್ವಾಮಿ ದೇಗುಲದಲ್ಲಿ ಗುರುವಾರ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿ, ನಂತರ ಮನೆ-ಮನೆಗೆ ತೆರಳಿ ಮಂತ್ರಾಕ್ಷತೆ, ಕರಪತ್ರ ವಿತರಿಸಿದರು.
ಬಿಜೆಪಿ ಮುಖಂಡರಾದ ಜಿ.ಎಸ್.ಅನಿತ್‌ಕುಮಾರ್, ಮಲ್ಲಿಕಾರ್ಜುನ್, ವೆಂಕಟೇಶ್ ಯಾದವ್, ನರೇಂದ್ರ, ನಾಗರಾಜ್ ಬೇದ್ರೆ, ಸರಸ್ವತಿಪುರಂ ನಾಗರಿಕರ ಸಂಘದ ಚಿದಾನಂದಪ್ಪ, ಶ್ರೀನಿವಾಸ್‌ರೆಡ್ಡಿ, ಸಂಜಯ್, ಮಾದನಾಯಕ್, ಸರಸ್ವತಿ, ನೇತ್ರ ಇತರರಿದ್ದರು.