ಮಂಡಳಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

Lokayuktha
Published on

ಚಿತ್ರದುರ್ಗ: ತುಂಡು ಕಾಮಗಾರಿ ಅನುಮೋದನೆ ಸಂಬಂಧ 4 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಎಸ್.ವೈ.ಬಸವರಾಜಪ್ಪ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಘಟನೆ ಹಿನ್ನಲೆ: ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ 10, ಖಿಲಾಕಣಕುಪ್ಪೆ ಗ್ರಾಮದಲ್ಲಿ 5 ಸೇರಿ ಒಟ್ಟು 15 ತುಂಡು ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ಪಡೆಯಲು 1 ವರ್ಷಗಳ ಕಾಲ ತೃತೀಯ ದರ್ಜೆ ಗುತ್ತಿಗೆದಾರ ವೈ.ಪಿ.ಸಿದ್ಧನಗೌಡ ಮಂಡಳಿಗೆ ಅಲೆದಾಡಿದ್ದಾರೆ.

ಕೊನೆಗೆ ಮಂಡಳಿಯ ಕಾರ್ಯದರ್ಶಿ ಭೇಟಿಯಾಗಿದ್ದು, 4 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನೀಡಲು ಇಷ್ಟವಿಲ್ಲದ ಗುತ್ತಿಗೆದಾರ ಮೇ 2ರಂದು ಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಸೋಮವಾರ ಕೊಠಡಿಯಲ್ಲಿ ಕಾರ್ಯನಿರ್ವಹಿಸುವ ವೇಳೆಯೇ ಬಸವರಾಜಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಎಸ್‌ಪಿ ಎನ್.ವಾಸುದೇವರಾಮ, ಡಿವೈಎಸ್‌ಪಿ ಎನ್.ಮೃತ್ಯುಂಜಯ, ಇನ್ಸ್‌ಪೆಕ್ಟರ್‌ಗಳಾದ ಬಿ.ಮಂಜುನಾಥ್, ವೈ.ಎಸ್.ಶಿಲ್ಪಾ ಕಾರ್ಯಚರಣೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net