ಮಂಠಾಳನಲ್ಲಿ ಗುರುಲಿಂಗೇಶ್ವರ ಜಾತ್ರೆ ವೈಭವ

5 bk 6
Published on

ಬಸವಕಲ್ಯಾಣ: ಮಂಠಾಳ ಗ್ರಾಮದಲ್ಲಿ ಶ್ರಾವಣ ಮಾಸದ ನಡುವಿನ ಸೋಮವಾರದಂದು ಶ್ರೀ ಗುರುಲಿಂಗೇಶ್ವರರ ಜಾತ್ರಾ ಮಹೋತ್ಸವ ನಿಮಿತ್ತ ಸಹಸ್ರಾರು ಭಕ್ತರ ಜೈಘೋಷಣೆಗಳ ಮಧ್ಯೆ ಅದ್ದೂರಿ ಪಲ್ಲಕ್ಕಿ ಉತ್ಸವ ನೆರವೇರಿತು.
ಶ್ರೀ ಗುರುಲಿಂಗೇಶ್ವರ ಮೂರ್ತಿ ಹಾಗೂ ಯೋಗ ದಂಡದೊAದಿಗೆ ಸಾಂಸ್ಕೃತಿಕ ವೈಭವದೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಸಾಗಿದ ಪಲ್ಲಕಿ ಉತ್ಸವದಲ್ಲಿ ತಾಳ ಮೇಳ, ವಾದ್ಯ, ಭಜನೆ, ಡೊಳ್ಳು ಕುಣಿತ, ಮಹಿಳೆಯರ ಹಲಿಗೆ ತಂಡ, ಕೋಲಾಟ, ಲೇಜಿಮ ಸೇರಿ ವಿವಿಧ ಕಲಾ ತಂಡಗಳ ಪ್ರದರ್ಶನ ಗಮನ ಸೆಳೆಯಿತು.
ಮಠದ ಪೀಠಾಧಿಪತಿ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ರಟಕಲ್‌ನ ಶ್ರೀ ಸಿದ್ದರಾಮ ಸ್ವಾಮೀಜಿ, ನಾಗೂರಿನ ಶ್ರೀ ಅಲ್ಲಮಪ್ರಭುಲಿಂಗ ಸ್ವಾಮೀಜಿ, ಬೇಲೂರಿನ ಶ್ರೀಪ್ರಭುಕುಮಾರ ಶಿವಾಚಾರ್ಯರು ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.
ಶಾಸಕ ಶರಣು ಸಲಗರ ಭೇಟಿ ನೀಡಿ ದರ್ಶನ ಪಡೆದರು. ಪ್ರಮುಖರಾದ ಜಗನ್ನಾಥ ಪಾಟೀಲ್, ವಿಶ್ವನಾಥ ಹುಗ್ಗೆ ಪಾಟೀಲ್, ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್, ರವೀಂದ್ರ ಶ್ಯಾಯಪ್ಪ, ಪುಷ್ಪರಾಜ ಹಾರಕೂಡೆ, ಶಿವಕುಮಾರ ಶೆಟಗಾರ, ಗಿರೀಶ ತಾಂಬಳೆ, ಭೀಮಣ್ಣ ಲೊಡ್ಡೆ, ಅರುಣ ಮಸ್ಕಲೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net