

ಆಲೂರು : ಕೋವಿಡ್ ಅಲೆ ಸಮೀಪಸುತ್ತಿರುವುದರಿಂದ ೨೦೨೩ ಮಾರ್ಚಿವರೆಗೆ ಕಾಯದೆ ಶೇ. ೧೦೦ ರಷ್ಟು ಪ್ರಗತಿ ಸಾಧಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಹಾಗೂ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ತಪಜುಲ್ ಹುಸೇನ್ ರವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಜನವರಿ ೨೦೨೩ ಅಂತ್ಯದೊಳಗೆ ಈಗಾಗಲೆ ಮಂಜೂರಾಗಿರುವ ಕಾಮಗಾರಿಗಳು ಪೂರ್ಣಗೊಂಡು ನಿಗಧಿತ ಗುರಿ ಸಾಧಿಸಬೇಕು. ಕಾರಣವಿಲ್ಲದೆ ಅನಾವಶ್ಯಕ ವಿಳಂಬವಾಗಬಾರದು. ಕಾನೂನು ಮಿತಿಯೊಳಗೆ ಗುರಿ ಸಾಧನೆಯಾಗಬೇಕು.
ವಿದ್ಯಾರ್ಥಿನಿಯರ ವಸತಿ ನಿಲಯಗಳಲ್ಲಿ ಇತ್ತೀಚೆಗೆ ಕೆಲ ಘಟನೆಗಳು ಸಂಭವಿಸುತ್ತಿರುವುದರಿAದ ಸಮಾಜ ಕಲ್ಯಾಣ ಇಲಾಖೆ ಅತ್ಯಂತ ಜಾಗೃತವಾಗಿರಬೇಕು. ೧೫ ದಿನಗಳಿಗೊಮ್ಮ ವಿದ್ಯಾರ್ಥಿನಿಯರಿಗೆ ವೈದ್ಯಕೀಯ ಪರೀಕ್ಷೆ ನಡೆಸಬೇಕು.
ಕಾಗನೂರು ಹೊಸಳ್ಳಿ, ಬೊಮ್ಮನಮನೆ, ಮೂಡನಹಳ್ಳಿ, ಹಳುವಳ್ಳಿ, ಸುಣ್ಣದಬೀದಿ ಸೇರಿದಂತೆ ಹಲವು ಅಂಗನವಾಡಿ ಕಟ್ಟಡಗಳ ನಿರ್ಮಾಣ ಕುಂಟಿತವಾಗಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಅನಾವಶ್ಯಕವಾಗಿ ತುಂಡುಗುತ್ತಿಗೆಯಲ್ಲಿ ಕಾಮಗಾರಿ ಕೈಗೊಳ್ಳಬಾರದು. ಭಾಗ್ಯ¯ಕ್ಷಿö್ಮ ಯೋಜನೆ ಫಲಾನುಭವಿಗಳಿಗೆ ಕೂಡಲೆ ಹಣ ಬಿಡುಗಡೆ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಕೆಲ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಿ ಮತ್ತು ಬಹುತೇಕ ಇಲಾಖೆಗಳಿಂದ ಪ್ರತಿನಿದಿಗಳು ಭಾಗವಹಿಸಿದ್ದರು. ವರದಿಯೂ ಅಪೂರ್ಣವಾಗಿದ್ದು ಪ್ರತಿನಿದಿಗಳು ಉತ್ತರಿಸಲು ಅಸಹಾಯಕರಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ಲೆಕ್ಕಾಧಿಕಾರಿಯವರು, ಅಧಿಕಾರಿಗಳು ಕನಿಷ್ಠ ಆತ್ಮಾವಲೋಕನ ಮಾಡಿಕೊಂಡು ಕೆಲಸ ಮಾಡುವಂತೆ ಸಲಹೆ ನೀಡಿ, ಗೈರು ಹಾಜರಾಗಿರುವ ಇಲಾಖೆಗೆ ಷೋಕಾಸ್ ನೋಟೀಸ್ ನೀಡುವಂತೆ ಸೂಚಿಸಿದರು.
ಕೋವಿಡ್ ಅಲೆ ಎದುರಾಗುತ್ತಿರುವುದರಿಂದ ಆರೋಗ್ಯ, ಶಿಕ್ಷಣ, ಶಿಶು ಅಭಿವೃದ್ಧಿ ಇಲಾಖೆಗಳು ಜಾಗೃತರಾಗಿ, ಜನಸಾಮಾನ್ಯರು, ವಿದ್ಯಾರ್ಥಿಗಳಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಬೇಕು. ಬೇಸಿಗೆ ಕಾಲ ಎದುರಾಗಿರುವುದರಿಂದ ಜಾನುವಾರುಗಳ ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ಯಾವುದೇ ಇಲಾಖೆಯಲ್ಲಿ ಅನುದಾನ ಖರ್ಚು ಮಾಡಲು ಸಾಧ್ಯವಾಗದಿದ್ದರೆ ಹಣ ವಾಪಾಸು ಮಾಡುವಂತೆ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನಾರಾಯಣಸ್ವಾಮಿಯವರು ಮಾತನಾಡಿ, ಕೋವಿಡ್, ಚುನಾವಣೆ ಸಮೀಪಿಸುತ್ತಿರುವುದರಿಂದ ಯೋಜನೆಗಳನ್ನು ಪೂರ್ಣಗೊಳಿಸಲು ಮುಂದಾಗಬೇಕು ಎಂದರು.