

ಚಿತ್ರದುರ್ಗ: ಕಾಂಗ್ರೆಸ್‌ನಿಂದ ಸಾಮಾಜಿಕ ನ್ಯಾಯದಡಿ ವಿಧಾನಪರಿಷತ್‌ಗೆ ಎಡಗೈ ಸಮುದಾಯಕ್ಕೆ ಸ್ಥಾನ ನೀಡುವುದಾದರೆ, ಜಿ.ಎಸ್.ಮಂಜುನಾಥ್ ಅವರನ್ನು ಪರಿಗಣಿಸಬೇಕು ಎಂದು ಕೈ ನಾಯಕರನ್ನು ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಎಸ್.ಜಯಣ್ಣ ಒತ್ತಾಯಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನೇಕ ವರ್ಷಗಳಿಂದಲೂ ಪಕ್ಷ ಸಂಘಟಿಸುವಲ್ಲಿ ಮಹತ್ತರ ಪಾತ್ರ ವಹಿಸಿರುವ ಮಂಜುನಾಥ್‌ಗೆ ನಾಮ ನಿರ್ದೇಶನಗೊಳಿಸಿದರೆ, ಚಿತ್ರದುರ್ಗ ಜಿಲ್ಲೆ ಮಾತ್ರವಲ್ಲದೆ, ರಾಜ್ಯದ ಹಲವೆಡೆ ಸಹಕಾರಿಯಾಗಲಿದೆ. ಆದ್ದರಿಂದ ಕೆಪಿಸಿಸಿ ಅಧ್ಯಕ್ಷರು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್ ಮಾತನಾಡಿ, ಜಿ.ಎಸ್.ಮಂಜುನಾಥ್ ಅವರು ಅನೇಕ ವರ್ಷಗಳಿಂದ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಪಕ್ಷ ನೀಡಿದ ವಿವಿಧ ಹುದ್ದೆ ಸಮರ್ಥವಾಗಿ ನಿರ್ವಹಿಸಿ ಜಿಲ್ಲೆಯಲ್ಲಿ ಸಂಘಟನೆಗೆ ಕಾರಣರಾಗಿದ್ದಾರೆ. ಆದ್ದರಿಂದ ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿದರು.
ಮುಖಂಡರಾದ ಮೋಹನ್ ಪೂಜಾರಿ, ರವಿಕುಮಾರ್, ಅಶೋಕ ನಾಯ್ಡು, ಅಶ್ವಿನ್‌ಕುಮಾರ್, ಸುನೀಲ್ ಇತರರಿದ್ದರು.