ಮಂಗಳೂರು ಪೊಲೀಸ್ ಶ್ವಾನದಳದ ಸದಸ್ಯೆ ಸುಧಾ ಇನ್ನಿಲ್ಲ

IMG-20210724-WA0033
Published on

ಮಂಗಳೂರು: ನಗರ ಪೊಲೀಸ್ ಕಮಿಶನರೇಟ್ ನ ಶ್ವಾನದಳದ ಸದಸ್ಯೆ ಸುಧಾ ಮೃತಪಟ್ಟಿದೆ.
ಡೊಬರ್ ಮನ್ ಶ್ವಾನ 2011 ಮಾರ್ಚ್ 15 ರಂದು ಜನಿಸಿತ್ತು. 2013 ಏ.2ರಂದು ಸೇವೆಗೆ ಸೇರಿತ್ತು. ಸಂದೀಪ್ ಎಂಬವರು ಈ ಶ್ವಾನದ ನಿರ್ವಹಣೆ ಮಾಡುತ್ತಿದ್ದರು.
ಹಲವಾರು ಅಪರಾಧ ಕೃತ್ಯಗಳಲ್ಲಿ ಆರೋಪಿಗಳ ಪತ್ತೆಯಲ್ಲಿ ಸುಧಾ ಪ್ರಮುಖ ಪಾತ್ರ ವಹಿಸಿತ್ತು. ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಮೊದಲಾದ ಹಿರಿಯ ಅಧಿಕಾರಿಗಳು ಮೃತ ಶ್ವಾನಕ್ಕೆ ಅಂತಿಮ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net