ಮಂಗಳೂರು ಕಾಣಿಕೆ ಡಬ್ಬಿಯಲ್ಲಿ ಅವಹೇಳನಕಾರಿ ಬರಹದ ಪತ್ರ ಪತ್ತೆ

Published on

ಮಂಗಳೂರು: ನಗರದ ದಡ್ಡಲ್ ಕಾಡ್ ಬಳಿ ಇರುವ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಕಾಂಡೊಮ್ ಹಾಗೂ ಅವಹೇಳನಕಾರಿ ಬರಹದ ಪತ್ರ ಪತ್ತೆಯಾಗಿದೆ.

ಕಾಣಿಕೆ ಡಬ್ಬಿಯ ಬಾಗಿಲು ಮುರಿದು ಒಳಗೆ ಹಾಕಿರುವುದು ಗುರುವಾರ ಬೆಳಗ್ಗೆ ಗಮನಕ್ಕೆ ಬಂದಿದೆ. ಉರ್ವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net