ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.09 ಕೋ.ರೂ. ಮೌಲ್ಯದ ಚಿನ್ನ ವಶ, ಇಬ್ಬರ ಬಂಧನ

Published on

ಶಾರ್ಜಾದಿಂದ ಗುರುವಾರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಬ್ಬರು ಪ್ರಯಾಣಿಕರಿಂದ 1.09 ಕೋಟಿ. ರೂ ಮೌಲ್ಯದ 2.15 ಕೆ.ಜಿ. ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಕಾಸರಗೋಡಿನ ಫೈಜಲ್ ತೊಟ್ಟಿ ಮೆಲ್ಪರಂಬ (37) ಹಾಗೂ ಮೊಹಮ್ಮದ್‌ ಶೋಹೈಬ್ ಮುಗು (31) ಬಂಧಿತರು. ಶಾರ್ಜಾದಿಂದ ಏರ್ ಇಂಡಿಯಾ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದು, ಈ ಸಂದರ್ಭ ಸಂಶಯದ ಮೇಲೆ ಅವರನ್ನು ತಪಾಸಣೆ ಮಾಡಲಾಗಿದೆ. ಒಳ ಉಡುಪಿನಲ್ಲಿ 24 ಕ್ಯಾರೆಟ್‌ 2.154 ಕೆ.ಜಿ. ಚಿನ್ನವನ್ನು ಬಚ್ಚಿಟ್ಟಿರುವುದು ಪತ್ತೆಯಾಗಿದೆ.

ಕಸ್ಟಮ್ಸ್ ಆಯುಕ್ತ ಇಮಾಮುದ್ದೀನ್ ಅಹ್ಮದ್, ಜಂಟಿ ಆಯುಕ್ತ ಜೋನಸ್ ಜಾರ್ಜ್ ಅವರು ತಂಡವನ್ನು ಅಭಿನಂದಿಸಿದ್ದು, ಕಸ್ಟಮ್ಸ್ ಉಪ ಆಯುಕ್ತ ಪ್ರವೀಣ ಕಂಡಿ, ಸೂಪರಿಂಟೆಂಡೆಂಟ್ ಶ್ರೀಕಾಂತ್ ಕೆ., ಶುಭೆಂದು ರಂಜನ್ ಬೆಹರೆ, ನವೀನ್‌ಕುಮಾರ್ ಅವರನ್ನು ಒಳಗೊಂಡ ತಂಡ ಕಾರ್ಯಚರಣೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net