ಮಂಗಳೂರಿನಲ್ಲಿ 38 ಮಂದಿ ಶ್ರೀಲಂಕಾ ಪ್ರಜೆಗಳ ಪತ್ತೆ

IMG-20210611-WA0059
Published on

ಮಂಗಳೂರು: ಶ್ರೀಲಂಕಾದಿಂದ ಅಕ್ರಮವಾಗಿ ಬಂದು ಮಂಗಳೂರು ನಗರದಲ್ಲಿ ನೆಲೆಸಿದ್ದ 38 ಮಂದಿಯನ್ನು ಮಂಗಳೂರು ಪೊಲೀಸರು ಪತ್ತೆ ಮಾಡಿದ್ದಾರೆ.

ತಮಿಳುನಾಡಿಗೆ ಬಂದು ಅಲ್ಲಿಂದ ಮಂಗಳೂರಿಗೆ ಬಂದಿದ್ದರು.
ತಮಿಳುನಾಡಿಗೆ ದೋಣಿಯಲ್ಲಿ ಬಂದಿದ್ದರು. ಅಲ್ಲಿಂದ ಬೆಂಗಳೂರಿಗೆ ಬಸ್ ನಲ್ಲಿ ಬಂದಿದ್ದರು. ಅಲ್ಲಿಂದ ಮಂಗಳೂರಿಗೆ ಬಂದು ಲಾಡ್ಜ್ ನಲ್ಲಿ ವಾಸವಿದ್ದರು. ಉದ್ಯೋಗ ಅರಸಿಕೊಂಡು ಕೆನಡಾಕ್ಕೆ ಹೋಗುವವರಿದ್ದರು. ತಮಿಳುನಾಡಿನಲ್ಲಿ ಚುನಾವಣೆ ಇದ್ದುದರಿಂದ ಮಂಗಳೂರಿಗೆ ಬಂದು ಉಳಿದುಕೊಂಡಿದ್ದರು. ಶ್ರೀಲಂಕಾದ ಏಜೆಂಟ್ ಇವರನ್ನು ಕಳುಹಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ತಮಿಳುನಾಡು, ಬೆಂಗಳೂರು, ಮಂಗಳೂರಿನಲ್ಲಿ ಏಜೆಂಟ್ ಮೂಲಕ ಮಂಗಳೂರಿಗೆ ಬಂದಿರುವುದು ಗೊತ್ತಾಗಿದೆ. ಮಾರ್ಚ್ ತಿಂಗಳಲ್ಲಿ ಅವರು ಶ್ರೀಲಂಕಾದಿಂದ ಹೊರಟು ಬಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net