ವಿಜಯವಾಣಿ ಸುದ್ದಿಜಾಲ ಗದಗ
ಮನುಷ್ಯಜನ್ಮ ಶ್ರೇಷ್ಠವಾದದ್ದು. ಜೀವನ ವ್ಯರ್ಥವಾಗದಂತೆ ಅರ್ಥವಿಲ್ಲದಂತೆ ಬದುಕಬಾರದು. ನಮ್ಮೋಳಗಿನ ಆತ್ಮ ಇಂದ್ರಿಯಗಳ ನಂಜಿನಲ್ಲಿರುವದರಿಂದ ಅದರಂತೆ ತನು ಮನ ಪಾತ್ರ ಮಾಡುತ್ತದೆ ಯಾವುದನ್ನು ಸಮಾಜ ಅಲ್ಲಗಳೆಯುತ್ತದೆ ಅದನ್ನು ನೀವು ಅಪ್ಪಬೇಡಿ ಒಪ್ಪಬೇಡಿ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಸುರೇಶ ಕುಂಬಾರ ಹೇಳಿದರು.
ಶಿವಶರಣಮ್ಮನವರ ಧ್ಯಾನಯೋಗಾ ಶ್ರಮ ಸಹಯೋಗದಲ್ಲಿ ಬೆಟಗೇರಿಯ ಚೆನ್ನಮ್ಮ ಉದ್ಯಾನವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಂಗಳಮುಖಿಯರಿಗೆ ಹಾಗೂ ಪೌರಕಾಮಿರ್ಕರಿಗೆ ವಸ್ತ್ರಧಾರಣಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಅಲ್ಲದ, ಒಲ್ಲದ ಬದುಕನ್ನು ಬಯಸಿ ಸಾಧಿಸುವುದಾದರು ಏನು? ಉತ್ತಮ ಸಮಾಜ ನಿರ್ಮಾಣಕ್ಕೆ ನಾವು ನಿವೆಲ್ಲ ಕಾರಣರಾಗಬೇಕು. ಆತ್ಮಸ್ಥೆರ್ಯದಿಂದ ನಿಮಗೆ ದೇವರು ನೀಡಿದ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು. ಗೌರವಯುತ ಬದುಕು ರೂಪಿಸಿಕೊಳ್ಳಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ, ಸಣ್ಣ ಕೈಗಾರಿಕೆಯಿಂದ ದುಡಿದು ಗಳಿಸಿ ಗೌರವ ಗರ್ವದಿಂದ ಬದುಕಿ ಎಂದು ಸಲಹೆ ನೀಡಿದರು.
ಮಂಗಳಮುಖಿಯರನ್ನು ನೋಡುವ ಕಾಲ ಬದಲಾಗಿದೆ. ಕಲಾವಿದರಾಗಿ, ಅಭಿಯಂತರರಾಗಿ ಹಲವು ೇತ್ರದಲ್ಲಿ ಮಂಗಳ ಮುಖಿಯರು ಸಾಧನೆ ಮಾಡುತ್ತಿದ್ದಾರೆ ಎಂದರು.
ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಬಸವರಾಜ ಮಲ್ಲೂರ ಮಾತನಾಡಿ, ಮಂಗಳ ಮುಖಿಯರಿಗೂ ಹಲವು ಕೌಶಲ್ಯ ಯುಕ್ತ ತರಬೇತಿಗಳನ್ನು ಕೌಶಲ್ಯ ಇಲಾಖೆಯಿಂದ ನೀಡಲಾಗುತ್ತತ್ತಿದೆ. ನೀವೂ ಸರಳವಾಗಿ ಎಲ್ಲರ ಜೊತೆ ಬೆರೆತು ಬದುಕುವ ಮನಸ್ಸನ್ನು ರೂಢಿಸಿಕೊಳ್ಳಬೇಕು. ನಮ್ಮ ಜೀವನ ಕಡು ಕಷ್ಠವೆಂದು ಭಾವಿಸದೇ ಸರಳತೆಯಿಂದ ಬದುಕಿ ಉಜ್ವಲ ಉತ್ತಮ ಜೀವನ ನಡೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕವಿಗೋಷ್ಠಿ. ಚಿತ್ರಕಲಾ ಸ್ಪರ್ಧೆಕೌಶಲ್ಯ ತರಬೇತುದಾರರಿಗೆ ಪ್ರಮಾಣ ಪತ್ರ ವಿತರಣೆ, ಯೋಗ ಪ್ರದರ್ಶನ ಕಾರ್ಯಕ್ರಮ ಜರುಗಿದರು.
ನಿರ್ಮಲಾ ತರವಾಡೆ, ರಾಜೇಂದ್ರ ಗಡಾದ, ವಿನಾಯಕ ಕಮತದ, ರಜನಿ ಪಾಟೀಲ, ಜ್ಯೋತಿ ಭರಮಗೌಡರ, ಚಂದ್ರು ನಾವಿ, ಪ್ರೀಯಾಂಕ ಹಳ್ಳಿ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಐ. ಕೆ ಕಮ್ಮಾರ, ರಾಜು ಧೂಳ, ಲಿಂಗರಾಜ ಬಗಲಿ, ಬಸವರಾಜ ಈರಣ್ಣವರ, ಪುಷ್ಪಲತಾ ಬಿಜಾಪೂರ, ಸುನಿತಾ ಕುಭೇರಸಿಂಗ ಹಲವರು ಇದ್ದರು.