ಮಂಗ ಕಚ್ಚಿ ಮಗುವಿಗೆ ಗಾಯ

9-gdg-11
Published on

ಗದಗ: ನಗರದ ಕೆ.ಸಿ. ರಾಣಿ ರಸ್ತ್ತೆಯಲ್ಲಿ ಎರಡೂವರೆ ವರ್ಷದ ಮಗುವಿನ ಮೇಲೆ ಮಂಗ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಭಾನುವಾರ ಜರುಗಿದೆ. ಮನೆ ಮುಂದೆ ಆಟವಾಡುತ್ತಿದ್ದ ಆದ್ಯಾ ಎಂಬ ಬಾಲಕಿ ಮಂಗನ ದಾಳಿಗೆ ಒಳಗಾಗಿದ್ದಾಳೆ. ಮಗುವಿನ ತಲೆ, ಬೆನ್ನಿಗೆ ಮಂಗ ಕಚ್ಚಿ ಗಾಯಗೊಳಿಸಿದೆ. ಜನರು ಮಂಗನನ್ನು ಬೆದರಿಸಿ ಓಡಿಸಿದ್ದಾರೆ. ಗಾಯಗೊಂಡ ಮಗುವನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಕಳೆದ 15 ದಿನಗಳಲ್ಲಿ ನಾಲ್ವರು ಮಂಗನ ದಾಳಿಗೆ ಒಳಗಾಗಿದ್ದಾರೆ. ಮಂಗನ ಹಾವಳಿಯಿಂದ ಸ್ಥಳೀಯರು ಬೇಸತ್ತು ಹೋಗಿದ್ದಾರೆ. ಮನೆ ಒಳಗೆ ನುಗ್ಗಿ ಕೈಗೆ ಸಿಕ್ಕ ವಸ್ತುಗಳನ್ನು ಹೊತ್ತುಕೊಂಡು ಹೋಗುತ್ತಿವೆ ಎಂದು ಜನರು ಆರೋಪಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net