ಮ.ಬೆಟ್ಟದಲ್ಲಿ ವ್ಯಾಪಾರ ಜೋರು

27 HANUR 2 A
ಮ.ಬೆಟ್ಟ-ತಾಳುಬೆಟ್ಟದ ಮಾರ್ಗದ 7ನೇ ತಿರುವಿನಲ್ಲಿ ಬುಧವಾರ ಟ್ರಾಫಿಕ್ ಜಾಮ್‌ನಿಂದಾಗಿ ವಾಹನಗಳು ಸಾಲುಗಟ್ಟಿ ನಿಂತಿರುವುದು.
Published on


ಭಕ್ತರಿಲ್ಲದೆ ಗಿಜಿಗುಡುತ್ತಿರುವ ಧಾರ್ಮಿಕ ಕ್ಷೇತ್ರ


ಹನೂರು: ದೀಪಾವಳಿ ಜಾತ್ರಾ ಮಹೋತ್ಸದ ಹಿನ್ನೆಲೆಯಲ್ಲಿ ಒಂದು ವಾರದಿಂದ ಭಕ್ತರಿಂದ ಗಿಜಿಗುಡುತ್ತಿದ್ದ ಮಲೆಮಹದೆಶ್ವರ ಬೆಟ್ಟದಲ್ಲಿ ಬುಧವಾರ ಮಹಾ ರಥೋತ್ಸವ ಜರುಗಿದ ಬಳಿಕ ಭಕ್ತರು ತಮ್ಮ ಊರುಗಳಿಗೆ ಹಿಂದಿರುಗಿದರು. ಪರಿಣಾಮ ಭಕ್ತರ ಸಂಖ್ಯೆ ಕ್ಷೀಣಗೊಂಡಿತ್ತು.

ಜಾತ್ರೆ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಕಳೆದ ವಾರದ ಹಿಂದೆಯೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕಾಲ್ನಡಿಗೆ ಮೂಲಕ ಆಗಮಿಸಿ ದೇವರ ದರ್ಶನ ಹಾಗೂ ವಿವಿಧ ಉತ್ಸವದ ಸೇವೆಗಳಲ್ಲಿ ಪಾಲ್ಗೊಂಡು ಅಲ್ಲಿಯೇ ಬೀಡು ಬಿಟ್ಟಿದ್ದರು. ಬುಧವಾರ ಬೆಳಗ್ಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆದ ರಥೋತ್ಸವದ ಬಳಿಕ ಬಹುತೇಕ ಭಕ್ತರು ತಮ್ಮ ಊರುಗಳಿಗೆ ವಾಪಸಾದರು. ಇದರಿಂದಾಗಿ ಬಸ್ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿನ ಅಂಗಡಿ-ಮುಂಗಟ್ಟುಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜನಜಂಗುಳಿ ನಿರ್ಮಾಣವಾಗಿತ್ತು. ಇದರಿಂದ ವ್ಯಾಪಾರ- ವಹಿವಾಟು ಬಲು ಜೋರಾಗಿಯೇ ನಡೆಯಿತು.

ಟ್ರಾಫಿಕ್ ಜಾಮ್: ರಥೋತ್ಸವ ಮುಗಿದ ಬೆನ್ನಲ್ಲೇ ಬಹುತೇಕ ಭಕ್ತರು ತಮ್ಮ ಗ್ರಾಮಗಳಿಗೆ ಹಿಂದಿರುಗಲು ಬಸ್ ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಕೆಲವರಿಗೆ ಬಸ್ ಸಿಗದೆ ಗಂಟೆಗಟ್ಟಲೇ ಕಾದು ನಿಂತು ತೊಂದರೆ ಅನುಭವಿಸಿದರು. ಇನ್ನು ಇದೇ ವೇಳೆ ಮ.ಬೆಟ್ಟ -ತಾಳುಬೆಟ್ಟ ಮಾರ್ಗವಾಗಿ ಹೆಚ್ಚಿನ ವಾಹನಗಳು ಸಂಚರಿಸಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿ ಆನೆತಲೆ ದಿಂಬದ ತಿರುವು ಹಾಗೂ 7ನೇ ತಿರುವಿನಲ್ಲಿ ಆಗಾಗ್ಗೆ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಪರಿಣಾಮ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net