ಮ.ಬೆಟ್ಟದಲ್ಲಿ ಇ-ಹುಂಡಿ ವ್ಯವಸ್ಥೆ

19 HANUR 3
ಮಲೆಮಹದೇಶ್ವರ ಬೆಟ್ಟದಲ್ಲಿ ಇ ಹುಂಡಿ ವ್ಯವಸ್ಥೆಗೆ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿ ದೇವಿ ಚಾಲನೆ ನೀಡಿದರು. ಬಸವರಾಜು, ಪ್ರವೀಣ್ ಪಟೇಲ್, ಮಲ್ಲಿಕಾರ್ಜುನ, ಮಹದೇವಸ್ವಾಮಿ ಇದ್ದರು.
Published on

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಕಾರದೊಂದಿಗೆ ಇ-ಹುಂಡಿ ವ್ಯವಸ್ಥೆಗೆ ಸೋಮವಾರ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿದೇವಿ ದೇಗುಲದ ಒಳಾಂಗಣದಲ್ಲಿ ಚಾಲನೆ ನೀಡಿದರು.


ನಂತರ ಮಾತನಾಡಿ, ಭಕ್ತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಪ್ರಾಧಿಕಾರ ಇ ಹುಂಡಿ ವ್ಯವಸ್ಥೆಗೆ ಮುಂದಾಗಿದ್ದು, ಸಿಸಿ ಕ್ಯಾಮರಾ ಇರುವ ಮ.ಬೆಟ್ಟದ ದೇವಸ್ಥಾನ, ದಾಸೋಹ ಭವನ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಇ-ಹುಂಡಿಗಳನ್ನು ಇಡಲು ನಿರ್ಧರಿಸಸಲಾಗಿದೆ. ಭಕ್ತರು ಇನ್ನು ಮುಂದೆ ಆನ್‌ಲೈನ್ ಮೂಲಕವೇ ಹರಕೆ ಕಾಣಿಕೆಗಳನ್ನು (ಪೇಮೆಂಟ್) ಸಲ್ಲಿಸಬಹುದು. ಇದರಿಂದ ನೂಕುನುಗ್ಗಲಿನಲ್ಲಿ ತೆರಳಿ ಹುಂಡಿಗಳಿಗೆ ಹಣ ಹಾಕುವುದು ತಪ್ಪಿದಂತಾಗುತ್ತದೆ ಎಂದರು.

ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜು, ಲೆಕ್ಕಾಧೀಕ್ಷಕ ಪ್ರವೀಣ್ ಪಟೇಲ್, ದ್ವಿತೀಯ ದರ್ಜೆ ಸಹಾಯಕ ಮಹದೇವಸ್ವಾಮಿ, ಪಾರುಪತ್ತೆದಾರ ಮಲ್ಲಿಕಾರ್ಜುನ ಹಾಗೂ ಎಸ್‌ಬಿಐನ ಅಧಿಕಾರಿ ಹಾಗೂ ಪ್ರಾಧಿಕಾರದ ನೌಕರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net