

ಚಾಮರಾಜನಗರ: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಜಾತ್ರೆ ಅಕ್ಷಯ ಪಾತ್ರೆಯಾಗಿ 3 ಕೋಟಿ ರೂಪಾಯಿಗಳಿಗೂ ಅಧಿಕ ಆದಾಯ ತಂದುಕೊಟ್ಟಿದೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಹೊಣೆಗಾರಿಕೆಯಲ್ಲಿ ೆ.25ರಿಂದ ಮಾ.1ವರೆಗೆ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ನಡೆಯಿತು. ಜಾತ್ರೆಗೂ ಮುನ್ನವೇ ಬೆಂಗಳೂರು, ತುಮಕೂರು, ರಾಮನಗರ, ಮಂಡ್ಯ, ಮೈಸುರು, ಚಾಮರಾಜನಗರ ಇನ್ನಿತರೆ ಜಿಲ್ಲೆಗಳಿಂದ ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡರು. ಈಗಲೂ ಸಹ ಮ.ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ. ಇದೇ ರೀತಿ ೆ.22ರಿಂದ ಮಾ.1ವರೆಗೆ ಜಾತ್ರೆಯಲ್ಲಿ ಪಾಲ್ಗೊಂಡ ಭಕ್ತರಿಂದ ಒಟ್ಟು 3.37 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಕಳೆದ ವರ್ಷ ನಡೆದ ಮಹಾಶಿವರಾತ್ರಿ ಜಾತ್ರೆಯಲ್ಲಿ 3.24 ಕೋಟಿ ರೂ. ಆದಾಯ ಹರಿದುಬಂದಿತ್ತು.
ಯಾವುದರಿಂದ ಎಷ್ಟು ಹಣ ಸಂಗ್ರಹ?: ೆ.22ರಿಂದ ಮಾ.1ವರೆಗೆ ದೇಗುಲದಲ್ಲಿ ನಡೆದ ಉತ್ಸವಗಳಲ್ಲಿ ಒಟ್ಟು 94,24347 ರೂ., ದೇವರ ಸೇವೆ-6,58600 ರೂ., ಮಿಶ್ರ ಪ್ರಸಾದ-9,31250 ರೂ., ಮಾಹಿತಿ ಕೇಂದ್ರ-7,82800 ರೂ., ಕಲ್ಲು ಸಕ್ಕರೆ-1,84820 ರೂ., ತೀರ್ಥ ಪ್ರಸಾದ-3,62000 ರೂ., ಬ್ಯಾಗ್-2,36745 ರೂ., ಪುದುವಟ್ಟು-4,83340 ರೂ., ಅಕ್ಕಿಸೇವೆ-4,01250 ರೂ., ಗುತ್ತಿಗೆ-5,025 ರೂ., ಇತರೆ-56,560 ರೂ. ಸೇರಿ ಒಟ್ಟು 3,37,08,287 ರೂ. ಆದಾಯ ಸಂಗ್ರಹವಾಗಿದೆ.
ಕೋಟಿ ರೂ. ಆದಾಯ ತಂದ ಮಾದಪ್ಪನ ‘ಲಾಡು’:
ಮಲೆ ಮಹದೇಶ್ವರ ಬೆಟ್ಟದ ದೇಗುಲದ ಲಾಡು ಪ್ರಸಾದವೆಂದರೆ ಭಕ್ತರಿಗೆ ಅಚ್ಚುಮೆಚ್ಚು. ಸಾಮಾನ್ಯ ದಿನಗಳಲ್ಲೂ ಲಾಡು ಖರೀದಿ ಜೋರಾಗಿರುತ್ತದೆ. ಜಾತ್ರೆಗಳಲ್ಲಿ ಲಾಡು ಮಾರಾಟ ದುಪ್ಪಟ್ಟಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಾ ಶಿವರಾತ್ರಿ ಜಾತ್ರೆಯಲ್ಲಿ 8 ದಿನಗಳ ಲಾಡು ಮಾರಾಟದಲ್ಲಿ ಪ್ರಾಧಿಕಾರಕ್ಕೆ 1.44 ಕೋಟಿ ರೂ. ಆದಾಯ ಸಿಕ್ಕಿದೆ. ೆ.22ರಂದು 9,34775 ರೂ., ೆ.23ರಂದು 25,05900 ರೂ., ೆ.24ರಂದು 22,15975 ರೂ., ೆ.25ರಂದು 16,11025 ರೂ., ೆ.26ರಂದು 23,67400 ರೂ., ೆ.27ರಂದು 20,26950 ರೂ., ೆ.28ರಂದು 16,44525 ರೂ., ಮಾ.1ರಂದು 11,87500 ರೂ. ಸೇರಿ ಒಟ್ಟು 1,44,94,050 ರೂ. ಸಿಕ್ಕಿದೆ.
ಭರ್ತಿಯಾಗುತ್ತಿದೆ ಸಾರಿಗೆ ಬೊಕ್ಕಸ:
ಮಲೆ ಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಕೆಎಸ್‌ಆರ್‌ಟಿಸಿ ನೀಡಿದ್ದ ಸಾರಿಗೆ ಸೌಲಭ್ಯದಿಂದ ಬೊಕ್ಕಸ ಭರ್ತಿಯಾಗುತ್ತಿದೆ. ಜಾತ್ರಾ ವಿಶೇಷ ಬಸ್‌ಗಳು ಇನ್ನೂ ಸಂಚಾರ ಮುಂದುವರೆಸಿದ್ದು, ಮುಕ್ತಗೊಂಡ ಬಳಿಕ ಕೆಎಸ್‌ಆರ್‌ಟಿಸಿಗೆ ಒಟ್ಟಾರೆಯಾಗಿ ಲಭಿಸಿರುವ ಆದಾಯ ಎಷ್ಟೆಂದು ತಿಳಿಯಲಿದೆ. ಈ ಕುರಿತು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್‌ಕುಮಾರ್ ‘ವಿಜಯವಾಣಿ’ಯೊಂದಿಗೆ ಮಾತನಾಡಿ, ಕಳೆದ ವರ್ಷದ ಮಹಾಶಿವರಾತ್ರಿ ಜಾತ್ರೆ ಸಂದರ್ಭದಲ್ಲಿ ಕೇವಲ ಒಂದು ವಾರಕ್ಕೆ ಕೆಎಸ್‌ಆರ್‌ಟಿಸಿಗೆ 5.45 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಒಂದೆರಡು ದಿನಗಳ ಬಳಿಕ ಈ ವರ್ಷದ ಜಾತ್ರೆಯಿಂದ ಎಷ್ಟು ಆದಾಯ ಸಿಗಲಿದೆ ಎಂದು ತಿಳಿಯಲಿದೆ ಎಂದಿದ್ದಾರೆ.
ವಿಶೇಷ ದರ್ಶನದಿಂದ 56 ಲಕ್ಷ ರೂ.:
ವಿಶೇಷ ದರ್ಶನದಲ್ಲಿ ೆ.22ರಂದು 1,80500 ರೂ., ೆ.23ರಂದು 6,16000 ರೂ., ೆ.24ರಂದು 3,45500 ರೂ., ೆ.25ರಂದು 1,45250 ರೂ., ೆ.26ರಂದು 20,69250 ರೂ. ೆ.27ರಂದು 13,49250 ರೂ., ೆ.28ರಂದು 8,17000 ರೂ., ಮಾ.1ರಂದು 1,64,750 ರೂ. ಸೇರಿ ಒಟ್ಟು 56,87,500 ರೂ. ಆದಾಯ ಬಂದಿದೆ.
ಆದಾಯ ಬಂದಾಗ ಉದ್ಭವಿಸುವ ಪ್ರಶ್ನೆ: ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಜಾತ್ರೆಗಳಲ್ಲಿ ಭಕ್ತರಿಂದ ಪ್ರಾಧಿಕಾರಕ್ಕೆ ಕೋಟ್ಯಾಂತರ ರೂ. ಆದಾಯ ಹರಿದುಬಂದಾಗ ಸೌಕರ್ಯದ ಪ್ರಶ್ನೆ ಉದ್ಭವಿಸುತ್ತದೆ. ಕ್ಷೇತ್ರಕ್ಕೆ ಬರುವ ಭಕ್ತರು ತಮಗೆ ಉಂಟಾಗುವ ಅನಾನುಕೂಲಗಳ ಪ್ರಶ್ನೆ ಎತ್ತಿ ಇಷ್ಟೊಂದು ಆದಾಯ ಬರುವಾಗ ಉತ್ತಮ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯ ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಚರ್ಚೆಗಳು ನಡೆಯುತ್ತಲೇ ಇರುತ್ತವೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಶಿವರಾತ್ರಿ ಹಬ್ಬದ ಜಾತ್ರೆಯಲ್ಲಿ 8 ದಿನಗಳಲ್ಲಿ 3.37 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಎ.ಈ.ರಘು, ಪ್ರಾಧಿಕಾರದ ಕಾರ್ಯದರ್ಶಿ