

ಚಿತ್ರದುರ್ಗ: ಸಮಾಜದಲ್ಲಿ ಶಿಕ್ಷಕ ವೃತ್ತಿಗೆ ಬಹಳ ಪ್ರಾಮುಖ್ಯವಿದೆ ಎಂದು ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ ಹೇಳಿದರು.
ನಗರದ ಎಸ್‌ಆರ್‌ಎಸ್ ಶಿಕ್ಷಣ ವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮೌಲ್ಯಗಳ ಕೊರತೆಯಿಂದಾಗಿ ಸಮಾಜದಲ್ಲಿಂದು, ಭ್ರಷ್ಟಾಚಾರ, ವಂಚನೆ ಅಧಿಕವಾಗುತ್ತಿವೆ. ಸಮಾಜದ ಸುಸ್ಥಿರತೆಯಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ಪ್ರಶಿಕ್ಷಣಾರ್ಥಿಗಳು ಧನಾತ್ಮಕ ಚಿಂತನೆಯೊಂದಿಗೆ ತರಬೇತಿ ಪಡೆದು ದೇಶಕ್ಕೆ, ಕುಟುಂಬಕ್ಕೆ ಕೀರ್ತಿ ತರಬೇಕು ಎಂದರು.
ವಿವಿಧ ಕ್ರೀಡೆಗಳ ವಿಜೇತ ಉಪನ್ಯಾಸಕರಿಗೆ ಬಹುಮಾನ ವಿತರಿಸಲಾಯಿತು. ಉಪ ಪ್ರಾಂಶುಪಾಲ ಡಾ.ಬಿ.ಹನುಮಂತಪ್ಪ, ಹಿರಿಯ ಉಪನ್ಯಾಸಕರಾದ ಪಿ.ಬಿ.ಆಶಾ, ಆರ್.ಮಮತಾ, ಟಿ.ಕಲ್ಲಪ್ಪ, ಬಿ.ರವಿಕುಮಾರ್, ಎಲ್.ಪಿ.ದಯಾನಂದ ಇದ್ದರು.