ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವ ಸರಕಾರ

17ydg06
Published on


ಯಾದಗಿರಿ: ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರ ಹೆಚ್ಚಾಗಿದ್ದು, ಇದರಿಂದ ಅಭಿವೃದ್ಧಿಯ ಮೇಲೆ ಕರಿನೆರಳು ಬಿದ್ದಿದೆ ಎಂದು ಆರೋಪಿಸಿ ಮಂಗಳವಾರ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಯುವ ಮುಖಂಡ ಅಮೀನರಡ್ಡಿ ಯಾಳಗಿ ಮಾತನಾಡಿ, ಕಾಂಗ್ರೆಸ್ ಸರಕಾರ ಆಡಳಿತ ಬಂದಾಗಿನಿಂದ ರಾಜ್ಯದಲ್ಲಿ ಲೂಟಿ ಶುರುಮಾಡಿದೆ. ಸಾವಿರಾರು ಕೋಟಿ ಅಕ್ರಮ ಹಣ ಪತ್ತೆಯಾಗುತ್ತಿದೆ. ಸರಕಾರದ ಕಾಮಗಾರಿಗಳ ಬಿಲ್ಪಾಸ್ ಮಾಡಲು ಕಮಿಷನ್ ಪಡೆಯಲಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ನಮ್ಮ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್ನವರು ಈಗ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಮೈಸೂರಿನಲ್ಲಿ ನಡೆಯುತ್ತಿರುವ ನಾಡಹಬ್ಬ ದಸರಾ ಉತ್ಸವದಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಖ್ಯಾತ ಕಲಾವಿದ ಪಂ.ತಾರಾನಾಥ ಅವರಲ್ಲೂ ಅಧಿಕಾರಿಗಳು ಲಂಚ ಕೇಳಿದ್ದಾರೆ. ಇದು ಇಡೀ ರಾಜ್ಯದ ಜನತೆ ತಲೆತಗ್ಗಿಸುವಂತೆ ಮಾಡಿದೆ. ಅಧಿಕಾರಿಗಳು ಬಯ್ಬಿಟ್ಟರೆ ಲಂಚ ಕೇಳುತ್ತಿದ್ದಾರೆ. ಇದರಿಂದ ಶ್ರೀಸಾಮಾನ್ಯ ನಿತ್ಯ ತೊಂದರೆ ಅನುಭವಿಸುತ್ತಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಪಂಪ್ಸೆಟ್ಗಳಿಗೆ ಸರಿಯಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ನಿರಂತರ ಲೋಡ್ಶೆಡ್ಡಿಂಗ್ನಿಂದ ಅನ್ನದಾತ ಪರಿತಪಿಸುತ್ತಿದ್ದಾನೆ. ಬಿಜೆಪಿ ಪಕ್ಷವನ್ನು ಕೋಮುವಾದಿ ಎಂದು ಹೇಳುವ ಕಾಂಗ್ರೆಸ್ ನಿಜವಾದ ಕೋಮುವಾದಿ. ಇದಕ್ಕೆ ಶಿವಮೊಗ್ಗ ನಗರದಲ್ಲಿ ನಡೆದ ಘಟನೆ ಸಾಕ್ಷಿ ಎಂದು ಸಕರ್ಾರದ ವಿರುದ್ಧ ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net