ಭ್ರಷ್ಟಾಚಾರ ಬಡಿದೊಡಿಸಲು ‘ಜೆಸಿಬಿ’ ಪಕ್ಷಗಳ ತಿರಸ್ಕರಿಸಿ: ರವಿಕೃಷ್ಣಾ ರೆಡ್ಡಿ

SGR WEB 44444
Published on

ಸಾಗರ: ಭ್ರಷ್ಟಾಚಾರ ತೊಲಗಬೇಕು ಎಂದರೆ ರಾಜ್ಯದ ಜನತೆ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಯನ್ನು ತಿರಸ್ಕರಿಸಬೇಕು. ಇದಕ್ಕೆ ಹೋರಾಟದ ಭೂಮಿ ಸಾಗರದಲ್ಲೇ ಅಡಿಪಾಯ ಬೀಳಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಹೇಳಿದರು.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನವಚೈತನ್ಯ ಯಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಒಂದು ವೋಟು-ಒಂದು ನೋಟು ಅಭಿಯಾನಕ್ಕೆ ಸಾಗರ ಹೋಟೆಲ್ ವೃತ್ತದಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ರಾಜ್ಯದ 29 ಜಿಲ್ಲೆಗಳಲ್ಲಿ ಚೈತನ್ಯ ಯಾತ್ರೆ ಮೂಲಕ ಜನರಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. 30ನೇ ಜಿಲ್ಲೆಯಾಗಿ ಶಿವಮೊಗ್ಗಕ್ಕೆ ಯಾತ್ರೆ ಬಂದಿದ್ದು, ಜಿಲ್ಲೆಯ ಜನರು ಪಕ್ಷಕ್ಕೆ ಪೂರಕವಾಗಿ ಸ್ಪಂದಿಸುತ್ತಿದ್ದಾರೆ. ಜೆಸಿಬಿ ಪಕ್ಷಗಳಿಂದಲೇ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ. ಸ್ವಚ್ಛ, ಪ್ರಾಮಾಣಿಕ, ಜನಪರ ಆಡಳಿತ ನೀಡುವುದು ಕೆಆರ್‌ಎಸ್ ಪಕ್ಷದ ಉದ್ದೇಶವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net