ಭ್ರಷ್ಟಾಚಾರ ನಿರ್ಮೂಲನೆಗೆ ಸಾಂಘಿಕ ಪ್ರಯತ್ನ

4kmr1
Published on

ಕಮಲನಗರ: ಭ್ರಷ್ಟಾಚಾರ, ಲಂಚ, ಕೊಡುಗೆ, ನೆರವು, ಅಧಿಕಾರ ದುರ್ಬಳಕೆ ಸೇರಿ ಯಾವುದೇ ರೂಪದಲ್ಲಿ ಇರಬಹುದು. ಭ್ರಷ್ಟಾಚಾರ ಸಮಾಜಕ್ಕೆ ಅಂಟಿದ ಪಿಡುಗಾಗಿದೆ. ಅದರ ನಿರ್ಮೂಲನೆಗೆ ಸಾಂಘಿಕ ಪ್ರಯತ್ನ ಅಗತ್ಯ ಎಂದು ಬೀದರ್ ಲೋಕಾಯುಕ್ತ ಇನ್‌ಸ್ಪೆಕ್ಟರ್ ಪ್ರದೀಪ ಕೊಳ್ಳ ಹೇಳಿದರು.

ಪಟ್ಟಣದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿ, ಬೇರೆಯವರ ಹಕ್ಕುಗಳನ್ನು ನಾವು ಅನುಭವಿಸುವುದೇ ಭ್ರಷ್ಟಾಚಾರ ಎಂದರು. ನಾವು ಜೀವನದಲ್ಲಿ ಹಕ್ಕುಗಳಿಗೆ ನೀಡುವ ಪ್ರಾಮುಖ್ಯವನ್ನು ಕರ್ತವ್ಯಗಳಿಗೂ ನೀಡಬೇಕು. ಅದರಿಂದ ಹೊಣೆಗಾರಿಕೆ ಹೆಚ್ಚಾಗಿ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಭ್ರಷ್ಟಾಚಾರ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ತಾಪಂ ಇಒ ಮಾಣಿಕರಾವ ಪಾಟೀಲ್, ಸಹಾಯ ನಿರ್ದೇಶಕರಾದ ಹಣಮಂತರಾವ ಕೌಟಗೆ, ಶಿವಕುಮಾರ ಘಾಟೆ, ಎಇಇ ಸುಭಾಷ ದಾಲಗುಂಡೆ, ಬಿಆರ್‌ಪಿ ಶಶಿಕುಮಾರ ಬಿಡವೆ, ಜೆಇ ಮುಸ್ತಫಾ, ಗ್ರಾಪಂ ಸಿಬ್ಬಂದಿ ಮತ್ತು ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಇದ್ದರು. ಪಿಡಿಒ ರಾಜಕುಮಾರ ತಂಬಾಕೆ ಸ್ವಾಗತಿಸಿ, ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net