ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

30-GPT-1
Published on

ಗುಂಡ್ಲುಪೇಟೆ: ಕರ್ನಾಟಕ ರಾಜ್ಯ ಮೂಲ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ವತಿಯಿಂದ ಶನಿವಾರ ಸಮಿತಿಯ ಕೇಂದ್ರ ಕಚೇರಿ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಸಮಿತಿ ರಾಜ್ಯಾಧ್ಯಕ್ಷೆ ಲಕ್ಷ್ಮೀ ಮಹೇಶ್ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಾರ್ವಜನಿಕ ಕಚೇರಿ, ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ಸಂಘಟನೆಗಳು ಒಗ್ಗಟ್ಟಾಗಿ ಹೋರಾಡಬೇಕು, ಸ್ಥಳೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಸಿಗಬೇಕು, ಪಟ್ಟಣ ಹಾಗೂ ಗ್ರಾಮ ಪಂಚಾಯಿತಿ ವಾಣಿಜ್ಯ ಕಟ್ಟಡಗಳು ಹೊರ ರಾಜ್ಯದ ಉದ್ದಿಮೆದಾರರು ಹೆಚ್ಚಿನ ಬೆಲೆಗೆ ಖರೀದಿಸಿ ನಮ್ಮ ನಾಡಿನ ಜನರ ಅವಕಾಶವನ್ನು ಕಸಿದುಕೊಳ್ಳುತ್ತಿದ್ದಾರೆ. ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಸಮಿತಿ ರಾಜ್ಯ ಗೌರವಾಧ್ಯಕ್ಷ ಕೆ.ಎನ್.ಗುರುಸ್ವಾಮಪ್ಪ, ಉಪಾಧ್ಯಕ್ಷ ಶ್ರೀಕಂಠಪ್ಪ, ಜಿಲ್ಲಾ ಸಮಿತಿಯ ಮಂಜುನಾಥ್, ಈಶ್ವರ, ಗುಂಡ್ಲುಪೇಟೆ ತಾಲೂಕು ಗೌರವ ಅಧ್ಯಕ್ಷ ದೇವಣ್ಣ, ಅಧ್ಯಕ್ಷ ವಾಸು, ಪದಾಧಿಕಾರಿಗಳಾದ ಸುರೇಶ, ಮಹದೇವಪ್ಪ, ಗೋಪಾಲ, ಕುಮಾರ ಸುವರ್ಣಮ್ಮ, ಮುಖಂಡರಾದ ಉಮೇಶ, ಗಾಂಧಿ, ಕುಮಾರ, ಮಂಗಳಮ್ಮ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net