ಭ್ರಷ್ಟಾಚಾರ ನಡೆಯದಂತೆ ನೋಡಿಕೊಳ್ಳಿ

ydg06
Published on

ಹುಣಸಗಿ (ಗ್ರಾಮೀಣ): ಭ್ರಷ್ಟ ಅಧಿಕಾರಿಗಳಿಗೆ ರಾಷ್ಟಿçÃಯ ಭ್ರಷ್ಟಾಚಾರ ವಿರೋಧಿ ದಳ ಸಂಘಟನೆ ಸಿಂಹ ಸ್ವಪ್ನವಾಗಿರಬೇಕು. ಯಾರೇ ಭ್ರಷ್ಟಾಚಾರ ಮಾಡಿದರೂ ಕೂಡ ಅದನ್ನು ತಡೆಯಲು ಪ್ರಯತ್ನಿಸಬೇಕು ಎಂದು ರಾಷ್ಟಿçÃಯ ಭ್ರಷ್ಟಾಚಾರ ವಿರೋಧಿ ದಳದ ಜಿಲ್ಲಾಧ್ಯಕ್ಷ ಕಾಶೀನಾಥ ಹಾದಿಮನಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ತಾಲೂಕು ಪದಾಧೀಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿ, ಸಮಾಜದಲ್ಲಿ ಅನ್ಯಾಯ, ಅಕ್ರಮ ತಡೆಯಲು ಪ್ರಾಮಾಣಿಕ ಪ್ರಯತ್ನ ಮಾಡೋಣ. ಅಸಹಾಯಕ, ದೀನ ದಲಿತರ, ಹಿಂದುಳಿದವರ ಧ್ವನಿಯಾಗಿ ಕೆಲಸ ಮಾಡೋಣ ಎಂದರು. ಜಿಲ್ಲಾ ಪ್ರಧಾನಕಾರ್ಯದರ್ಶಿ ಬಸವರಾಜ ಕಟ್ಟಿಮನಿ, ಅಂಬರೀಶ ನೂಲಿನ್, ಸಂಗಮೇಶ ಕೊಡೇಕಲ್, ಮಲ್ಲು ಮಾಸ್ಟರ್, ತಾಯಪ್ಪ ಕನ್ನಳ್ಳಿ, ಸದ್ದಾಂ ಬಿದರಿ ಇತರರಿದ್ದರು. ಈ ವೇಳೆ ತಾಲೂಕು ಪದಾಧಿಕಾರಿಗಳ ನೇಮಕ ಮಾಡಲಾಯಿತು.

ನಿಂಗಪ್ಪ ದೇವರಮನಿ (ಅಧ್ಯಕ್ಷ), ಭೀಮು ಚೈನಿ (ಉಪಾಧ್ಯಕ್ಷ), ಗಯ್ಯಪ್ಪ ದೇವರಮನಿ (ಪ್ರಧಾನ ಕಾರ್ಯದರ್ಶಿ), ಚನ್ನು ಕಟ್ಟಿಮನಿ (ಕಾರ್ಯದರ್ಶಿ), ನಿಜಲಿಂಗಪ್ಪ ದೇವರಮನಿ (ಸಂ.ಕರ‍್ಯದರ್ಶಿ), ಯಲ್ಲಾಲಿಂಗ ಇಸ್ಲಾಂಪೂರ್ (ಖಜಾಂಚಿ), ವೆಂಕಟೇಶ್ ದೇವರಮನಿ, ಅಬ್ದುಲ್ ಜಿಲಾನಿ (ಸದಸ್ಯರು).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net